ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಒಪ್ಪಿಗೆ, ಷರತ್ತುಗಳು

Posted By: Gururaj
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 31 : ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನವೆಂಬರ್ 1ರಂದು ಕರಾಳ ದಿನಾಚರಣೆ ಆಚರಿಸಲು ಬೆಳಗಾವಿ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಗೆ ಕರಾಳ ದಿನಾಚರಣೆ ಜಾಥಾ ಆರಂಭವಾಗಲಿದೆ.

2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಳಗಾವಿ ಪೊಲೀಸ್ ಆಯುಕ್ತರು ಮಂಗಳವಾರ 5 ಲಕ್ಷ ರೂ. ಶೂರಿಟಿ ಪಡೆದು, ಕರ್ನಾಟಕ ಸರ್ಕಾರ, ಕನ್ನಡಿಗರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡದಂತೆ, ಘೋಷಣೆ ಕೂಗದಂತೆ ಹಲವು ಷರತ್ತುಗಳನ್ನು ವಿಧಿಸಿ ಕರಾಳ ದಿನ ಆಚರಣೆ ಮಾಡಲು ಅನುಮತಿ ನೀಡಿದ್ದಾರೆ.

MES to observe black day on November 1, 2017

ಬುಧವಾರ ಬೆಳಗ್ಗೆ 9 ಗಂಟೆಗೆ ಕರಾಳ ದಿನಾಚರಣೆ ಜಾಥಾ ಬೆಳಗಾವಿ ನಗರದ ಧರ್ಮವೀರ ಉದ್ಯಾನದಿಂದ ಆರಂಭವಾಗಲಿದೆ. ಈ ಜಾಥಾದಲ್ಲಿ ಎಂಇಎಸ್ ಮುಖಂಡರು ಭಾಗಿಯಾಗಲಿದ್ದು, ಮಹಾರಾಷ್ಟ್ರದಿಂದಲೂ ಅನೇಕ ನಾಯಕರು ಆಗಮಿಸುವ ನಿರೀಕ್ಷೆ ಇದೆ.

ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಕನ್ನಡ ಹೋರಾಟಗಾರರು ಒತ್ತಾಯಿಸಿದ್ದರು. ಅನುಮತಿ ನೀಡಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ, ವಿರೋಧವನ್ನು ಲೆಕ್ಕಿಸದೇ ಪೊಲೀಸರ ಕರಾಳ ದಿನಾಚರಣೆಗೆ ಅನುಮತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Maharashtra Ekikaran Samiti (MES) will observe as black day the Karnataka Rajyotsava celebrations on November 1, 2017 to protest against Karnataka government. Belagavi police have been given a permission to rally. ಬೆಳಗಾವಿಯಲ್ಲಿ ಕರಾಳ ದಿಚಾರಣೆಗೆ ಒಪ್ಪಿಗೆ, ಷರತ್ತುಗಳು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ