ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಕೆಎಟಿ ಪೀಠಕ್ಕೆ ಸದಸ್ಯರ ನೇಮಕ, ಡಿ.17ರಂದು ಉದ್ಘಾಟನೆ

|
Google Oneindia Kannada News

ಬೆಳಗಾವಿ, ಡಿಸೆಂಬರ್ 14 : ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. ಡಿಸೆಂಬರ್ 17ರಂದು ಬೆಳಗಾವಿಯಲ್ಲಿ ಕೆಎಟಿ ಪೀಠ ಉದ್ಘಾಟನೆಯಾಗಲಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿ.17ರ ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠವನ್ನು ಉದ್ಗಾಟನೆ ಮಾಡಲಿದ್ದಾರೆ.

ಡಿಸೆಂಬರ್ 17ರಂದು ಬೆಳಗಾವಿ ಕೆಎಟಿ ಪೀಠ ಲೋಕಾರ್ಪಣೆಡಿಸೆಂಬರ್ 17ರಂದು ಬೆಳಗಾವಿ ಕೆಎಟಿ ಪೀಠ ಲೋಕಾರ್ಪಣೆ

ಬೆಳಗಾವಿ ಕೆಎಟಿ ಪೀಠಕ್ಕೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಆಡಳಿತಾತ್ಮಕ ಸದಸ್ಯರಾಗಿ ವಿ.ಪಿ.ಬಳಿಗಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಗುರುವಾರ ಸಂಜೆ ಆದೇಶ ಹೊರಡಿಸಲಾಗಿದೆ.

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

Members appointed for KAT bench Belagavi

ಬೆಳಗಾವಿ ಕೆಎಟಿ ಪೀಠ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಈ ಜಿಲ್ಲೆಗಳ ಒಟ್ಟು 1506 ಪ್ರಕರಣಗಳು ಬಾಕಿ ಇವೆ.

ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು ಕೆಎಟಿ ಪೀಠದ ಅಧ್ಯಕ್ಷರಾಗಿದ್ದು ಮುಖ್ಯ ಪೀಠ ಬೆಂಗಳೂರಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ. ಡಿಸೆಂಬರ್ 17ರಿಂದ ಬೆಳಗಾವಿ, ಡಿಸೆಂಬರ್ 21ರಿಂದ ಕಲಬುರಗಿ ಪೀಠಗಳು ಕಾರ್ಯರಂಭ ಮಾಡಲಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಕೆಎಟಿ ಪೀಠ ಸ್ಥಾಪನೆ ಮಾಡಬೇಕು ಎಂಬುದು ಹಲವು ವರ್ಷಗಳ ಒತ್ತಾಯವಾಗಿತ್ತು. ಈಗ ಎರಡು ಪೀಠಗಳನ್ನು ಸರ್ಕಾರ ಸ್ಥಾಪನೆ ಮಾಡುತ್ತಿದೆ.

English summary
Karnataka Administrative Tribunal (KAT) in Belagavi will began work from December 17, 2018. Two members appointed for bench.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X