ಸಮಸ್ಯೆಗಳ ಚರ್ಚೆ ಬದಲು ರಾಜಕೀಯ ಭಾಷಣ, ಸಿಎಂ ವಿರುದ್ಧ ಈಶ್ವರಪ್ಪ ವಾಗ್ದಾಳಿ

Posted By: ಬೆಳಗಾವಿ ಪ್ರತಿನಿದಿಯಿಂದ
Subscribe to Oneindia Kannada

ಬೆಳಗಾವಿ, ನವೆಂಬರ್ 24 : ಉತ್ತರ ಕರ್ನಾಟಕ ಸಮಸ್ಯೆ ಕುರಿತು ಸಾಕಷ್ಟು ಚರ್ಚೆ ಮಾಡಿದ್ದೇವೆ ಆದರೆ ಸಿದ್ದರಾಮಯ್ಯ ಅವರು ಇದಕ್ಕೆ ಉತ್ತರ ನೀಡದೆ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗು ಜಗಳಗಳ ನಡುವೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ

ಶಾಸಕರನ್ನು ಕರೆದು ಅಧಿವೇಶನ ನಡೆಸಿ ಸಿದ್ದರಾಮಯ್ಯ ಅವರು ಅವಮಾನ ಮಾಡಿದ್ದಾರೆ. ಸಚಿವ ಎಂಬಿ ಪಾಟೀಲ್ ಅವರು ಲಿಂಗಾಯತ ಧರ್ಮ ಅಂತ ಓಡಾಡಿಕೊಂಡಿದ್ದಾರೆ. ನೀರಾವರಿ ಸಮಸ್ಯೆ ಕುರಿತು ಮಾತನಾಡಿಲ್ಲ. ಯಾವುದೇ ಪ್ರಯೋಜನವಿಲ್ಲದೆ ಅಧಿವೇಶನ ಮುಗಿಯುತ್ತಿದೆ.

MB Patil failed to address irrigation issues : Eshwarappa

ಕೋಟ್ಯಾಂತರ ಹಣ ವ್ಯಯಿಸಿ ಮಾಡಿದ ಅಧಿವೇಶನ ವ್ಯರ್ಥವಾಗಿದೆ. ನೀರಾವರಿ ಸಮಸ್ಯೆಗಳಿಗೂ ಸಮಪರ್ಕ ಉತ್ತರ ಸರ್ಕಾರದಿಂದ ಬಂದಿಲ್ಲ. ಸರ್ಕಾರ ನಾಮಕಾವಸ್ತೆಗೆ ಅಧಿವೇಶನ ನಡೆಸಿದೆ, ರಾಜ್ಯದ ಜನರ ತೆರಿಗೆಯ ಹಣ ಪೋಲಾಗಿದೆ. ಮುಖ್ಯಮಮತ್ರಿಗಳು ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ ಹಾಗಾಗಿ ಅವರು ಜನರ ಬಳಿ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Leader of Opposition in the state legislative Council KS Eshwarappa alleged that the irrigation Minister MB Patil has failed to address the issues which discuss in the ongoing session.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ