ಬೆಳಗಾವಿಯ ಬೀದಿಯಲ್ಲೇ ಸ್ನಾನ ಮಾಡಿದ ಮಾರ್ಷಲ್ ಗಳು

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 21: ಬೆಳಗಾವಿ ಅಧಿವೇಶನಕ್ಕೆ ಬಂದೋಬಸ್ತ್ ಗಾಗಿ ಬಂದಿದ್ದ ಮಾರ್ಷಲ್ ಗಳಿಗೆ ವಸತಿಯನ್ನೆನೋ ವ್ಯವಸ್ಥೆ ಮಾಡಲಾಗಿತ್ತು ಆದರೆ ಬಾತ್ ರೂಂ ಗಳೇ ಸರಿಯಾಗಿರಲಿಲ್ಲ.

2-3 ದಿನ ಮುಂಚೆಯೇ ಬಂದಿದ್ದ ಮಾರ್ಷಲ್ ಗಳು ಹೇಗೋ ಒಂದು ಸುಧಾರಿಸಿಕೊಂಡು ಜಿಲ್ಲಾಡಳಿತಕ್ಕೆ ಶೌಚಾಲಯ, ಸ್ನಾನಗೃಹಗಳನ್ನು ಸರಿಮಾಡಿ ಎಂದು ಹೇಳಿದ್ದಾರೆ ಆದರೂ ಇನ್ನು ಅದರು ಸರಿಯಾಗದ ಕಾರಣ ಹಿಂದಿನ ದಿನ ಜನ ಹೆಚ್ಚಾದ ಪರಿಣಾಮ ಸಿಕ್ಕಿದ ಬಕೇಟ್ ಗಳನ್ನು ಹಿಡಿದುಕೊಂಡು ಬಿದಿಯಲ್ಲಿಯೇ ಚಳಿಗಾಲದ ತಣ್ಣೀರು ಸ್ನಾನ ಮಾಡಿ ಕೆಲಸಕ್ಕೆ ತೆರಳಿದರು.[ರೈತರೇನು ಗೂಂಡಾಗಳೇ, ದೇಶದ್ರೋಹಿಗಳೇ?]

Marshall bathing in the road in belagavi

ಈ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದರೆ ವ್ಯವಸ್ಥೆ ಮಾಡುತ್ತೇವೆ ಎಂತಲೇ ಹೇಳುತ್ತಿದ್ದಾರೆ. ಸಾವಿರಾರು ಜನಕ್ಕೆ ವ್ಯವಸ್ಥಿತ ಶೌಚ, ಸ್ನಾನಕ್ಕೆ ಅನುಕೂಲ ಮಾಡದ ಜಿಲ್ಲಾಡಳಿತ ಅಧಿವೇಶನಕ್ಕೆ ಹೇಗೆ ಸಿದ್ದವಾಗಿದ್ದಾರೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.['ರೈತರನ್ನು ನಿರ್ಲಕ್ಷಿಸಿದರೆ ಸಿದ್ದರಾಮಯ್ಯಗೆ ಉಳಿಗಾಲ ಇಲ್ಲ']

ಇನ್ನು ಮಾರ್ಷಲ್ ಗಳು ಸರ್ಕಾರ ಕೆಲಸಕ್ಕೆ ಕರೆಸಿಕೊಂಡಿದೆ ಅವರು ಹೇಳಿದಂತೆ ಕೇಳಲೇ ಬೇಕು ವ್ಯವಸ್ಥೆಯಿಲ್ಲದಿದ್ದರೂ ಕೆಲಸ ಆಗಲೇ ಬೇಕಲ್ಲ ಎಂದು ಹೇಳಿದ್ದಾರೆ.[ದಯವಿಟ್ಟು ಶೌಚಾಲಯ ಕಟ್ಟಿಸಿಕೊಳ್ಳಿ, ನಿಮ್ಮ ಕಾಲಿಗೆ ಬೀಳುತ್ತೀನಿ!]

ಮಾರ್ಷಲ್ ಗಳು ಇನ್ನುಹತ್ತುದಿನಗಳ ಕಾಲ ನೋಡಿ ಸ್ವಾಮಿ ನಾವಿರೋದೆ ಹೀಗೆ, ಎಂದು ಬೀದಿಯಲ್ಲಿ ತಂಬಿಗೆ, ಬಕೇಟ್ ಹಿಡಿದು ನಡೆದಾಡಿದರೆ ಏನು ಮಾಡಬೇಕು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Arranged the winter session in Belagavi Suvarna vidhana soudha on Monday, Marshall are coming yesterday but system is not require properly, the next day Marshall are bathing in the road in belagavi.
Please Wait while comments are loading...