• search

ಕನ್ನಡಿಗರನ್ನು ಕೆರಳಿಸಿ, ಮರಾಠಿ ಯುವಕರಿಂದ ಪ್ರೋಮೊ

By ಬೆಳಗಾವಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಳಗಾವಿ, ಅಕ್ಟೋಬರ್ 31: ಕನ್ನಡ ರಾಜ್ಯೋತ್ಸವ ಸಮಿಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಮತ್ತೆ ಕ್ಯಾತೆ ತೆಗೆದಿದೆ. ಪ್ರತಿ ವರ್ಷ ರಾಜ್ಯೋತ್ಸವ ದಿನದಂದು ಆಚರಿಸುವ ಕರಾಳ ದಿನಾಚರಣೆಗೆ ಪೊಲೀಸ್ ಇಲಾಖೆಯಿಂದ ಷರತ್ತುಬದ್ದ ಅನುಮತಿ ಪಡೆದಿದೆ.

  ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

  ಸಂಘಟನೆಯ ಕೆಲ ಯುವಕರು ಮರಾಠಿ ಭಾಷೆಯಲ್ಲಿ ಪ್ರೋಮೊ ಒಂದನ್ನು ತಯಾರಿಸಿದ್ದು ಅದರಲ್ಲಿ ಮರಾಠಿಗರನ್ನು ಪ್ರಚೋದಿಸಿ, ಕನ್ನಡಿಗರನ್ನು ಕೆರಳಿಸುವಂತಹ ಸಂದೇಶವನ್ನು ಸಾರುವ ಮೂಲಕ ಮತ್ತೆ ಬೆಳಗಾವಿಯಲ್ಲಿ ಭಾಷಾ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಈ ಪ್ರೋಮೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೃತ್ಯಕ್ಕೆ ಕನ್ನಡಪರ ಸಂಘಟನೆಗಳು ಕೆಂಡ ಕಾರಿದ್ದು, ಕೂಡಲೇ ಪ್ರೋಮೊ ತಯಾರಿಸಿದವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  Marathi youths provoking Kannadigas through video promo

  ಇನ್ನು ಪ್ರೋಮೊದಲ್ಲಿ ಏನಿದೆ ಅಂದರೆ, ಐವರು ಯುವಕರು ಒಬ್ಬೊಬ್ಬರಾಗಿ ಪ್ರಚೋದನೀಯ ಮಾತುಗಳನ್ನಾಡಿದ್ದಾರೆ.

  1) ಕರ್ನಾಟಕದಲ್ಲಿ ಮರಾಠಿಗರಿಗೆ ಗೌರವ ಸಿಗುತ್ತಿಲ್ಲ. ನನ್ನ ಒಂದು ಸಾಮಾನ್ಯ ಪ್ರಶ್ನೆ, ಬೆಳಗಾಂವ್ ಇದ್ದಿದನ್ನು ಬೆಳಗಾವಿ ಯಾಕೆ ಮಾಡಿದ್ರಿ?

  2) ನಮ್ಮ ಸಿಟ್ಟು ಯಾವ ಭಾಷೆ ಅಥವಾ ಭಾಷಿಕರ ಮೇಲಿಲ್ಲ. ನಮ್ಮ ಮೇಲಾಗುವ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೇವೆ.

  ನ. 1ರಂದು ಗುಂಡ್ಲುಪೇಟೆ ಬಸ್ ಕಂಡಕ್ಟರ್ ಎಳೆಯಲಿದ್ದಾರೆ ಕನ್ನಡದ ತೇರು

  3) 1956ರ ವರೆಗೆ ಮರಾಠಿ ರಾಜ್ಯದಲ್ಲಿ ಇದ್ವಿ. ಇಲ್ಲಿ ನಡೆಯುವ ಎಲ್ಲಾ ಸರಕಾರಿ ಕಾರ್ಯ ಕಲಾಪಗಳು ಮರಾಠಿಯಲ್ಲೇ ನಡೆಯುತ್ತಿದ್ದವು. ಎಲ್ಲಾ ದಾಖಲೆಗಳು ಕೂಡ ಮರಾಠಿಯಲ್ಲೇ ಲಭ್ಯವಿತ್ತು. ಈಗ ಬರೀ ಕನ್ನಡದಲ್ಲಿ ಯಾಕೆ?

  4) ಭಾಷಾ ನ್ಯಾಯಕ್ಕಾಗಿ ಹೋರಾಟ ಮಾಡಿದ ನನ್ನ ಜೊತೆಗಾರರ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುತ್ತಾರೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಅವರ ಜೀವನವೇ ಹಾಳಾಗಿ ಹೋಯಿತು. ನನ್ನೋರ್ವ ಮಿತ್ರ ಪರಶುರಾಮ್ ಪಾಟೀಲ್ ಇದೆಲ್ಲದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ. ಇನ್ನೂ ಎಷ್ಟು ಜನರ ಬಲಿ ತೆಗೆದುಕೊಳ್ಳುತ್ತೀರಾ?

  5) ನಾವು ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತರಾಗಿ ಬದುಕುತ್ತಿದ್ದೇವೆ. ಹಾಗಾದ್ರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರೆಂದು ಯಾಕೆ ಬದುಕಬೇಕು? ಬೆಳಗಾಂವ್, ಕಾರವಾರ್, ನಿಪ್ಪಾಣಿ, ಬೀದರ್, ಭಾಲಕಿ, ಸಂತಪೂರ್, ಹುಮನಾಬಾದ್ ಸೇರಿದಂತೆ ಎಲ್ಲ ಪ್ರಾಂತ್ಯವೂ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು. ನಾವು ಗಡಿ ಪ್ರಾಂತ್ಯದವರು... ನಾವು ಮರಾಠಿಗರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Novermber 1st Karnataka rajyotsava will celebrate. On that day MES organisation celebrate black day in Belagavi. Apart from this Marathi youths created a promo and provoking Kannadigas.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more