ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಪಂ ಸಭೆಯಲ್ಲಿ ಮರಾಠಿ ಮಾತನಾಡಿದ ಶಾಸಕನಿಗೆ ಮುಖಭಂಗ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 29 : ಮರಾಠಿ ಭಾಷೆಯಲ್ಲಿ ಮಾತನಾಡಿದ ಖಾನಾಪುರ ಶಾಸಕ ಅರವಿಂದ್ ಪಾಟೀಲ್ ಅವರ ವರ್ತನೆಗೆ ಹಲವಾರು ಶಾಸಕರು ಹಾಗೂ ಸ್ವತಃ ಜಿಲ್ಲಾಧಿಕಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸೋಮವಾರ ನಡೆಯಿತು.

ಸಭೆಯಲ್ಲಿ ಯಾರಿಗೂ ಮರಾಠಿ ಬರುವುದಿಲ್ಲ, ಆಡಳಿತ ಭಾಷೆ ಕನ್ನಡ, ಕನ್ನಡದಲ್ಲೇ ಮಾತನಾಡುವಂತೆ ಜಿಲ್ಲೆಯ ಶಾಸಕ ಮತ್ತು ಡಿಜಿ ಜಿಯಾವುಲ್ಲಾ ಒತ್ತಾಯಿಸಿದರು. ಕನ್ನಡದಲ್ಲಿ ಮಾತನಾಡಿ ಎಂದು ಮೊದಲು ಧ್ವನಿ ಎತ್ತಿದ ಶಾಸಕ ಲಕ್ಷ್ಮಣ್ ಸವದಿ ಅವರಿ ಮಾತಿಗೆ ಶಾಸಕ ಉಮೇಶ್ ಕತ್ತಿ, ರಾಜು, ಪಿ. ರಾಜೀವ್ ಸಾಥ್ ನೀಡಿದರು.

ಬೆಳಗಾವಿ: ಎಂಇಎಸ್ ಶಾಸಕನಿಂದ ಕಾಂಗ್ರೆಸ್ ನಾಯಕಿಗೆ ಆವಾಜ್ಬೆಳಗಾವಿ: ಎಂಇಎಸ್ ಶಾಸಕನಿಂದ ಕಾಂಗ್ರೆಸ್ ನಾಯಕಿಗೆ ಆವಾಜ್

ಕಳೆದ ಬಾರಿ ಸಭೆಯಲ್ಲಿ ಕನ್ನಡ ಮಾತನಾಡಿದ್ದೀರ, ಈಗ ಏಕೆ ಮಾತನಾಡುವುದಿಲ್ಲ, ಚುನಾವಣೆ ವರ್ಷ ಎಂದು ಮಾತನಾಡುವುದಿಲ್ಲವಾ ಎಂದು ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ನಮ್ಮ ಮರಾಠಿಗರ ಬೇಡಿಕೆ ಈಡೇರಿಸಿ, ನಾವು ಕರ್ನಾಟಕದಲ್ಲಿದ್ದೇವೆ, ನಮಗೇನು ಮಹಾರಾಷ್ಟ್ರಕ್ಕೆ ಹೋಗಬೇಕಾಗಿಲ್ಲ ಎಂದರು.

Marathi affection questioned in ZP meeting
English summary
Many MLA's and officials objected affection towards Marathi language of MES MLA Arvind patil who spoken in Marathi in Zilla Panchayat meeting held on Monday in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X