ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮತ್ತೆ ಮರಾಠಾ ಯುವ ಮಂಚ್ ಅಟ್ಟಹಾಸ

By Manjunatha
|
Google Oneindia Kannada News

ಬೆಳಗಾವಿ, ಡಿಸೆಂಬರ್ 08 : ಬೆಳಗಾವಿಯಲ್ಲಿ ಮರಾಠಾ ಯುವಮಂಚ್ ತನ್ನ ಪುಂಡಾಟ ಮುಂದುವರೆಸಿದೆ , ನಗರದ ಪ್ರಾದೇಶಿಕ ಕಚೇರಿ ಮುಂದಿರುವ ಕನ್ನಡ ಧ್ವಜವನ್ನು ಹಾರಿಸಂದತೆ ಅದು ಒತ್ತಾಯಿಸಿ ಪುಂಡಾಟಿಕೆ ಮೆರೆದಿದೆ.

ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ

ನಗರದ ಪ್ರಾದೇಶಿಕ ಕಚೇರಿ ಮುಂದೆ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಕೂಡಲೆ ತೆರವುಗೋಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು ಪ್ರತಿಭಟನೆ ವೇಳೆ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಧೃತರಾಷ್ಟ್ರನಿಗೆ ಹೋಲಿಸಿದರು.

Marata Yuva Manch Demands to down Karnataka flag in Belagavi

ರಾಷ್ಟ್ರೀಯ ಧ್ವಜ ದಿನದಂದು ಬೇಕೆಂದೆ ಶಾಂತಿ ಕದಡಲು ಪ್ರತಿಭಟನೆ ಮಾಡಿದ ಮರಾಠಾ ಯುವಮಂಚ್ ಸದಸ್ಯರು, ಕಣ್ಣಿಗೆ ಕಪ್ಪು ಪಟ್ಟಿಕಟ್ಟಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು

ಇದೇ ಸಂದರ್ಭದಲ್ಲಿ ಭಾಷಣ ಮಾಡಿದ ಮರಾಠಾ ಯುವ ಮಂಚ್ ಕಾರ್ಯಕರ್ತ ಸೂರಜ್ ಕಣಬರಕರ್ ರಾಜ್ಯದ ಯಾವ ಸರ್ಕಾರಿ ಕಚೇರಿ ಎದುರು ಕೂಡ ಕರ್ನಾಟಕ ಧ್ವಜ ಹಾರಿಸಬಾರದು, ಇದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ.

ಪ್ರತಿಭಟನೆ ವಿರುದ್ಧ ಬೆಳಗಾವಿ ಜಿಲ್ಲಾಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

English summary
Marata Yuva Manch did strike in Demand to down Karnataka flag witch hoisted near Belagavi DC office. District administration and police department didnot take any action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X