ಬೆಳಗಾವಿ: ಹಸುಳೆಯನ್ನು ರೇಪ್ ಮಾಡಿ ಜೀವಂತ ಸಮಾಧಿ ಮಾಡಲೆತ್ನಿಸಿದ ಕಾಮುಕ

Subscribe to Oneindia Kannada

ಬೆಳಗಾವಿ, ಸೆಪ್ಟೆಂಬರ್ 10: ಎರಡೂವರೆ ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕನೊಬ್ಬ ಮಗುವನ್ನು ಜೀವಂತ ಹೂಳಲು ಯತ್ನಿಸಿದ ಘಟನೆ ಶನಿವಾರ ಸಂಜೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಮಗುವನ್ನು ರಕ್ಷಿಸಲಾಗಿದೆ.

Man raped a 2.5 year old girl and tried to bury her alive in Belagavi

ಇನ್ನು ಹಸುಳೆ ಎಂದೂ ನೋಡದೆ ಅತ್ಯಾಚಾರ ಎಸಗಿದ ಸುಭಾಷ್ ಮಹದೇವ್ ನಾಯ್ಕರ್ ಎಂಬಾತನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಸಂಜೆ ಆರು ಗಂಟೆ ಹೊತ್ತಿಗೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮಗು ಆಟವಾಡುತ್ತಿತ್ತು. ಈ ವೇಳೆ ಆರೋಪಿಯು ಮಗುವನ್ನು ತನ್ನ ಜತೆ ಆಟವಾಡಲು ಕರೆದು ನಂತರ ಶಾಲೆ ಕಟ್ಟಡದ ಹಿಂಭಾಗ ಅತ್ಯಾಚಾರ ಎಸಗಿದ್ದಾನೆ.

ನಂತರ ಮಗುವಿನ ಮುಖ ಮತ್ತು ಎದೆಗೆ ಕಚ್ಚಿ ಶಾಲೆಯ ಆವರಣ ಗೋಡೆಯ ಹಿಂಭಾಗ ಸಣ್ಣ ಗುಂಡಿ ತೋಡಿ ಹೂಳಲು ಯತ್ನಿಸಿದ್ದಾನೆ. ಇನ್ನೇನು ಮುಕ್ಕಾಲು ಭಾಗ ಮಣ್ಣಿನಲ್ಲಿ ಮಗುವನ್ನು ಹೂತಿದ್ದ.

ಆದರೆ ಮಗು ಸಂಜೆ 7 ಗಂಟೆಯಾದರೂ ಬಂದಿಲ್ಲ ಎಂದು ಮಗುವಿನ ತಂದೆ ಮತ್ತು ಗ್ರಾಮಸ್ಥರು ಹುಡುಕಾಡುತ್ತಾ ಬಂದಾಗ ಆರೋಪಿ ಮಗುವನ್ನು ಹೂಳಿತ್ತಿದ್ದ ದೃಶ್ಯ ಕಾಣಿಸಿದೆ. ಈ ವೇಳೆ ತಂದೆ ಮಗುವನ್ನು ರಕ್ಷಿಸಿದ್ದು ಗ್ರಾಮಸ್ಥರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಗುವಿಗೆ ಇಲ್ಲಿನ ನೇಸರಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮಗು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದು, ರಕ್ತ ಸ್ರಾವ ನಿಲ್ಲಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಸದ್ಯಕ್ಕೆ ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police arrest a man who allegedly raped a 2.5 year old girl and tried to bury her alive after committing the crime in Bailhongal of Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ