ಬೆಳಗಾವಿ: ಸಾಲ ವಾಪಾಸ್ ಕೇಳಿದ್ದಕ್ಕೆ, ಕತ್ತು ಸೀಳಿ ಕೊಲೆಗೆ ಯತ್ನ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಜನವರಿ 09: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೈಲಹೊಂಗಲದ ಶಶಿಕುಮಾರ್ ಉರ್ಫ್ ರಾಜು ಅಂಗಡಿ ಇವರಿಂದ ಮಾರುತಿ ಬಂಡಿವಡ್ಡರ್ 6 ಸಾವಿರ ರೂ. ಸಾಲಪಡೆದಿದ್ದ. ಪಡೆದಿದ್ದ 6 ಸಾವಿರ ರೂಪಾಯಿ ಸಾಲವನ್ನು ಮರಳಿ ನೀಡುತ್ತೇನೆ ಬಾ ಎಂದು ಪುಸಲಾಯಿಸಿ ಕರೆದೊಯ್ದು ಕತ್ತುಕೊಯ್ಯಲು ಖದೀಮರು ಯತ್ನಿಸಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಪತ್ರಿಬಸವ ನಗರದಲ್ಲಿ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾಲ ಮರಳಿಸುತ್ತೇನೆ ಎಂದು ಪತ್ರಿ ಬಸವ ನಗರದ ಜನನಿಬಿಡ ಪ್ರದೇಶದಲ್ಲಿ ಶಶಿಕುಮಾರ್ ನನ್ನು ಕರೆದೊಯ್ದು ಮಾರುತಿ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

Man attacked who asked credit return

ಗಾಯಾಳು ಶಶಿಕುಮಾರ್ ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಮನೆಗೆ ಕರೆದೊಯ್ಯಲಾಗಿದೆ. ಗಾಯಾಳು ಶಶಿಕುಮಾರ್ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆಗೆ ಯತ್ನಿಸಿದ ಮಾರುತಿ ಹಾಗೂ ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man was attempt to killed by cutting his neck with sharp weapon after asked to return his credit amount Rs.6,000. This strange incident reported in Bail hongal town of Belgaum district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ