ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ವಿಚಾರ ಶೀಘ್ರ ಇತ್ಯರ್ಥಗೊಳ್ಳಬೇಕು: ಗೋವಾ ಸಂಸದ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 01: ಗೋವಾದ ಸಂಸದರೊಬ್ಬರು ಮಹದಾಯಿ ವಿಚಾರವಾಗಿ ಸಕಾರಾತ್ಮಕವಾಗಿ ಮಾತನಾಡಿದ್ದು, ಮಹದಾಯಿ ವಿಚಾರವಾಗಿ ನಕಾರಾತ್ಮಕ ಅಂಶಗಳನ್ನೇ ಗೋವಾ ಜನಪ್ರತಿನಿಧಿಗಳಿಂದ ಕೇಳಿದ್ದ ಕನ್ನಡಿಗರಿಗೆ ಇವರ ಮಾತು ಆಶಾಭಾವ ಮೂಡಿಸಿದೆ.

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ: ಶೆಟ್ಟರ್ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ: ಶೆಟ್ಟರ್

ಉತ್ತರ ಗೋವಾ ಸಂಸದ, ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಮಹದಾಯಿ ಕುಡಿಯುವ ನೀರಿನ ವಿವಾದ ಆದಷ್ಟು ಬೇಗ ಬಗೆಹರಿಯಬೇಕು ಎಂದು ಆಶಿಸಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು ಗೋವಾ-ಕರ್ನಾಟಕ ನೆರೆ-ಹೊರೆ ರಾಜ್ಯಗಳು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಬೇಕು ಎಂದಿದ್ದಾರೆ.

Mahadayi issue should be solved quickly :Shripad Naik

ಚರ್ಚೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ಉತ್ಸುಕತೆ ಇರುವ ಹಾಗೆ ಮಾತನಾಡಿದ ಅವರು 'ಮಹದಾಯಿ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು. ನಮಗೆ ಎದುರಾಗುವ ಸಂಕಷ್ಟಗಳನ್ನು ಒಟ್ಟಾಗಿ ಬಗೆ ಹರಿಸಿಕೊಳ್ಳಬೇಕು. ಮಹದಾಯಿ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಬೇಕು' ಎಂದಿದ್ದಾರೆ.

ಗೋವಾ ಮುಖ್ಯಮಂತ್ರಿ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇಕೆ? ಇಲ್ಲಿದೆ ಉತ್ತರಗೋವಾ ಮುಖ್ಯಮಂತ್ರಿ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇಕೆ? ಇಲ್ಲಿದೆ ಉತ್ತರ

ನ್ಯಾಯಾಧೀಕರಣದ ಒಳೆಗೆ ಅಥವಾ ಹೊರಗೆ ವಿವಾದ ಇತ್ಯರ್ಥವಾಗಬೇಕು. ಕುಡಿಯುವ ನೀರಿನ ವಿಚಾರ ಮಾನವೀಯತೆ ಆಧಾರದ ಮೇಲೆ ಬಗೆಹರಿಯಬೇಕು ಎಂದು ಕೇಂದ್ರ ಸಚಿವ ಶ್ರೀಪಾದ ನಾಯಕ್ ಹೇಳಿದ್ದಾರೆ.

English summary
Central minister, north Goa MP Shripad Naik said Goa-Karnataka are neighbor states they should solve Mahadayi issue as soon as possible. He also said drinking water issue should be deal with humanity basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X