ಲವ್ ಜಿಹಾದ್ ಗೆ ಖಡ್ಗದಿಂದ ಉತ್ತರ, ಸಾಧ್ವಿ ಸರಸ್ವತಿ ವಿವಾದಿತ ಹೇಳಿಕೆ

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada
   ಸಾಧ್ವಿ ಸರಸ್ವತಿ ಕೊಟ್ಟ ಖಡಕ್ ಸಂದೇಶ, ಲವ್ ಜಿಹಾದಗೆ ಖಡ್ಗವೇ ಉತ್ತರ | Oneindia Kannada

   ಬೆಳಗಾವಿ, ಫೆಬ್ರವರಿ 12: ಲವ್ ಜಿಹಾದ್ ಗೆ ಖಡ್ಗದ ಮೂಲಕವೇ ಉತ್ತರ ನೀಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಧ್ವಿ ಸರಸ್ವತಿ ಸುದ್ದಿ ಮಾಡಿದ್ದಾರೆ. ಭಾನುವಾರ ನಗರದ ಧರ್ಮವೀರ ಸಂಭಾಜಿ ಮೈದಾನದಲ್ಲಿ ನಡೆದ ಶ್ರೀರಾಮ ಸೇನೆ ಶಕ್ತಿ, ಭಕ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

   ರೇಷ್ಮಾ ಶಂಕಿತ ಲವ್ ಜಿಹಾದ್ ಪ್ರಕರಣದಲ್ಲಿ ಮಹತ್ವದ ತಿರುವು

   ಲವ್ ಜಿಹಾದ್ ಗೆ ಹೆದರಿ ಯುವತಿಯರನ್ನು ಮನೆಯಿಂದ ಹೊರಗೆ ಹೋಗದಂತೆ ತಡೆಯುವುದು ಬೇಡ. ಎಲ್ಲ ಸಹೋದರರು ತಮ್ಮ ಸಹೋದರಿಯರಿಗೆ ಖಡ್ಗ ನೀಡಿ. ಲವ್ ಜಿಹಾದ್ ಕಾರಣಕ್ಕಾಗಿ ಯಾವನೇ ತಲೆ ಎತ್ತಿ ನೋಡಿದರೂ ಅವನ ಕುತ್ತಿಗೆ ಕತ್ತರಿಸಿ ಭಾರತಾಂಬೆಯ ಪಾದಕ್ಕೆ ಅರ್ಪಿಸುವಂತೆ ಹೇಳಿ ಎಂದು ಸಾಧ್ವಿ ಸರಸ್ವತಿ ಕರೆ ನೀಡಿದರು.

   Love jihad should answered with sword: Sadhvi Saraswati

   ಸಹೋದರಿಯರು ತಮ್ಮ ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ರಾಣಿ ಲಕ್ಷ್ಮೀಬಾಯಿ, ಜೀಜಾ ಮಾತಾರಂತೆ ಆಗಲು ಮುಂದೆ ಹೆಜ್ಜೆ ಇಡಿ. ಲವ್ ಜಿಹಾದ್ ಗೆ ಯತ್ನಿಸುವವರು ತಲೆಯನ್ನು ಖಡ್ಗದಿಂದ ಕಡಿದು, ಭಾರತ ಮಾತೆಯ ಪಾದಗಳಿಗೆ ಅರ್ಪಿಸಿ ಎಂಬ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Hindu girls should carry sword, who try to love jihad must be beheaded, said Sadhvi Saraswati in Belagavi on Sunday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ