ಸದನದಲ್ಲಿ ಇಂದು: ಹೈ-ಕ ಭಾಗದ 1339 ನಿರುದ್ಯೋಗಿಗಳಿಗೆ ನೌಕರಿ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 23: ಹೈದ್ರಾಬಾದ್ ಕರ್ನಾಟಕ ಭಾಗದ ಜನತೆಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಬೇಸರ ಪಡುತ್ತಿದ್ದವರಿಗೆ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ 1339 ನಿರುದ್ಯೋಗಿಗಳು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಇನ್ನೂ 50 ಸಾವಿರ ನಿರುದ್ಯೋಗಿಗಳು ಕೆಲಸಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

sadan

ಈ ಆರು ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಇಲಾಖೆಯಲ್ಲಿ 1286 ಹಾಗೂ ಖಾಸಗಿ ವಲಯದಲ್ಲಿ 53 ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಮುಂದುವರೆದಂತೆ ಅವರಿಗೆ ಸೂಕ್ತ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.[ಸದನದಲ್ಲಿ ಇಂದು: ಪಿಯು ಉಪನ್ಯಾಸಕರಿಗೆ ವೇತನ ಬಡ್ತಿ]

17335 ಗ್ರಾಮಗಳಿಗೆ ಬಸ್ ಸೌಕರ್ಯ
ಸಾರಿಗೆ ಇಲಾಖೆ ಎಲ್ಲ ಗ್ರಾಮಗಳಲ್ಲೂ ಸಾರಿಗೆ ಸೌಲಭ್ಯ ಒದಗಿಸಲು ಪ್ರಯತ್ನವನ್ನು ಮಾಡುತ್ತಿದೆ. ಪ್ರಸ್ತುತ 17335 ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಪ್ರಸ್ತುತ ವರ್ಷ ಇದುವರೆಗೆ 562 ಬಸ್ ಗಳನ್ನು ಖರೀದಿಸಲಾಗಿದೆ. ಮಾರ್ಚ್ 2017ರ ಒಳಗಾಗಿ ಇನ್ನೂ 959 ಬಸ್ ಖರೀದಿ ಮಾಡಲಾಗುವುದು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ವರ್ಷ 72 ಬಸ್ ಖರೀದಿ ಮಾಡಲಾಗಿದೆ. 2017ರ ಮಾರ್ಚ್ ಒಳಗಾಗಿ 1350 ಬಸ್ ಖರೀದಿಸಲಾಗುವುದು ಎಂದರು.

sadana 2

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ವರ್ಷ 242 ಬಸ್ ಖರೀದಿಸಲಾಗಿದೆ. ಮುಂದಿನ ಮಾರ್ಚ್ ಒಳಗಾಗಿ 478 ಬಸ್ ಖರೀದಿ ಮಾಡಲಾಗುವುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಸ್ತುತ ಸಾಲಿನಲ್ಲಿ 1658 ಬಸ್ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.

ತುಂಗಭದ್ರಾ ಡ್ಯಾಂನಿಂದ ಪಾವಗಡಕ್ಕೆ ನೀರು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿಗೆ ತುಂಗಭದ್ರಾ ಅಣೆಕಟ್ಟೆಯಿಂದ ಪೈಪ್ ಲೈನ್ ಮೂಲಕ ನೀರು ಪೂರೈಕೆ ಯೋಜನೆ ನಿಯಮಾನುಸಾರ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.

ತಲಕಾವೇರಿಗೆ ಪೂಜೆಗೆ ಸಿಎಂ ಅಸ್ತು
ಕೊಡಗು ಜಿಲ್ಲೆಗೆ ಬರಪರಿಸ್ಥಿತಿ ಎದುರಾದಗೆಲ್ಲ ನಾಡಿನ ದೊರೆಗಳು ತಲಕಾವೇರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರೆ ಈ ಭಾಗದ ಜನರ ತಾಪ ಕಡಿಮೆಯಾಗಿ ಮಳೆಯಾಗುತ್ತದೆ ಎಂಬುದು ಈ ಭಾಗದ ಪ್ರತೀತಿ. ಈ ಕಾರಣದಿಂದ ಮುಖ್ಯಮಂತ್ರಿಗಳು ತಲಕಾವೇರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನಮ್ಮ ತಾಪ ಕಡಿಮೆ ಮಾಡಬೇಕೆಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಎಂ ಪಿ ಸುನೀಲ್ ಸುಬ್ರಮಣಿ ಮನವಿ ಮಾಡಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸುವುದಕ್ಕೆ ಒಪ್ಪಿಗೆ ನೀಡಿದರು.

ಕೆರೆಗಳ ಪುನಶ್ಚೇತನಕ್ಕೆ ಅನುದಾನ
ಈ ವರ್ಷವೂ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಕಳೆದ ವರ್ಷದ ಮಾದರಿಯಲ್ಲಿ ಕೆರೆ ತುಂಬಲು ಕ್ರಮವಹಿಸಲಾಗುವುದು. ಕೆರೆ ಕಲ್ಯಾಣ ಯೋಜನೆಯಡಿ ವಿಶೇಷ ಅನುದಾನ ಒದಗಿಸಿ ಕೆರೆಗಳ ಪುನಶ್ಚೇತನಕ್ಕೆ ಉತ್ತೇಜನ ನೀಡಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಖಾತೆ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

belagavi

ಬಾಲಮುರಳಿಕೃಷ್ಣ ನಿಧನ ಮೆಲ್ಮನೆಯಲ್ಲಿ ಸಂತಾಪ
ಕರ್ನಾಟಕ ಶಾಸ್ತ್ರೀಯ ಸಂಗೀತ ಮೇರು ಗಾಯಕ, ವಿದ್ವಾನ್ ಡಾ. ಮಂಗಳಂಪಲ್ಲಿ ಬಾಲಮುರುಳಿಕೃಷ್ಣ ಅವರ ನಿಧನಕ್ಕೆ ಮೇಲ್ಮನೆಯಲ್ಲಿ ಸಂತಾಪ ವ್ಯಕ್ತಪಡಿಸಿ ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಹಣಕಾಸು ಲೆಕ್ಕಗಳ ವರದಿ ಮಂಡನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನ ಪರಿಷತ್ ನಲ್ಲಿ 2015-16ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳ ವರದಿಯನ್ನು ಮಂಡಿಸಿದರು.

ಮಹದಾಯಿ: ಮಾತಕತೆ ಮೂಲಕ ಪರಿಹಾರ ಯತ್ನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದಾಯಿ ಜಲ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಮೂರು ರಾಜ್ಯಗಳ ನಡುವೆ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುವುದು, ಎಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
winter session of the Karnataka Assembly. The third day lot lot of planning the logistics of the winter session in Belagavi.
Please Wait while comments are loading...