ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಸುರೇಶ್‌ ಅಂಗಡಿ ಹ್ಯಾಟ್ರಿಕ್ ಸಾಧನೆ

By Ashwath
|
Google Oneindia Kannada News

ಬೆಳಗಾವಿ, ಮೇ. 16: ಹಾಲಿ ಸಂಸದ ಸುರೇಶ್‌ ಅಂಗಡಿ ಬೆಳಗಾವಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಲಕ್ಮೀ ಹೆಬ್ಬಾಳಕರರನ್ನು 75,860 ಮತಗಳಿಂದ ಸೋಲಿಸಿದ್ದಾರೆ.

ಬೆಳಗಾವಿಯಲ್ಲಿ ನಾಲ್ಕನೇಯ ಬಾರಿ ಬಿಜೆಪಿಯನ್ನು ಮತದಾರ ಬೆಂಬಲಿಸುವ ಮೂಲಕ, ಮೂರನೇ ಬಾರಿ ಸುರೇಶ್‌ ಅಂಗಡಿಯವರನ್ನು ಸಂಸತ್‌ಗೆ ಆಯ್ಕೆ ಮಾಡಿದ್ದಾರೆ.

ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರೂ ತಮ್ಮ ಅಭ್ಯರ್ಥಿ‌ಗಳ ಪರ ಪ್ರಚಾರ ಭಾಷಣ ನಡೆಸಿದ್ದರು. 2009ರಲ್ಲಿ 1,18,687 ಮತಗಳ ಅಂತರದಿಂದ ಗೆದ್ದಿದ್ದ ಸುರೇಶ್‌ ಅಂಗಡಿ ಈ ಬಾರಿ 75860 ಮತಗಳಿಂದ ಗೆಲ್ಲುವ ಮೂಲಕ ಬೆಳಗಾವಿಯ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಕೊನೆ ಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಸೀರ್‌ ಬಾಗವಾನ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಬಿಜೆಪಿಗೆ ಹಿನ್ನಡೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಈ ಬಾರಿಯೂ ಬೆಳಗಾವಿ ಕೋಟೆಯನ್ನ ತನ್ನಲ್ಲೇ ಉಳಿಸಿಕೊಂಡಿದೆ.

Suresh Angad
ಬೆಳಗಾವಿ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಸುರೇಶ್‌ ಅಂಗಡಿ 1 ಬಿಜೆಪಿ 554417
ಲಕ್ಮೀ ಹೆಬ್ಬಾಳಕರ
2 ಕಾಂಗ್ರೆಸ್ 478557
ಮುತ್ತಪ್ಪ ಅಂಗಡಿ 3 ಎಎಪಿ 8524
ನಾಸೀರ್‌ ಬಾಗವಾನ್‌ 4 ಜೆಡಿಎಸ್‌
5477
English summary
BJP candidate, Suresh Angadi - wins Belgaum. He defeated Lakshmi R Hebbalkar Congress. Suresh Angadi secured votes 554417, while Lakshmi R Hebbalkar got 4,78,557.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X