ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC 100% ಅಂಕ ಪಡೆದ ಪ್ರತಿಭಾಶಾಲಿಯನ್ನು ಸನ್ಮಾನಿಸಿದ ಕುಮಾರಸ್ವಾಮಿ

|
Google Oneindia Kannada News

ಬೆಳಗಾವಿ, ಡಿಸೆಂಬರ್ 12: ಇದೇ ಸಾಲಿನ ಹತ್ತನೇ ತರಗತಿ ಮುಖ್ಯ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿ ಮೊಹಮ್ಮಮದ್ ಕೈಫ್ ಅವರನ್ನು ಸಿಎಂ ಕುಮಾರಸ್ವಾಮಿ ಇಂದು ಅಭಿನಂದಿಸಿದರು.

ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಬೆಳಗಾವಿಯ ಸೇಂಟ್ ಕ್ಸೇವಿಯರ್ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಅವರು ಎಲ್ಲ ವಿಷಯಗಳಲ್ಲೂ ಪೂರ್ಣ ಅಂಕ ಸಂಪಾದಿಸಿ ಸಾಧನೆ ಮಾಡಿದ್ದಾರೆ.

Kumaraswamy honored a talented SSLC student in Belgavi

1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ

ಮೊದಲ ಭಾಷೆಯಾಗಿ ಇಂಗ್ಲಿಷ್‌ ಅನ್ನು ಆಯ್ಕೆ ಮಾಡಿಕೊಂಡಿದ್ದ ಮೊಹಮ್ಮದ್ ಕೈಫ್ ಅವರಿಗೆ ಆ ವಿಷಯದಲ್ಲಿ 125 ಕ್ಕೆ 125. ದ್ವಿತೀಯ ಭಾಷೆ ಕನ್ನಡದಲ್ಲಿ 100 ಕ್ಕೆ 100 ಅಂಕ. ಗಣಿತ, ವಿಜ್ಞಾನ, ಸಮಾಜ, ಹಿಂದಿ ಎಲ್ಲ ವಿಷಯಗಳಲ್ಲೂ 100ಕ್ಕೆ 100. ಮೊಹಮ್ಮದ್ ಕೈಫ್‌ನ ಒಟ್ಟು ಅಂಕ ಬರೋಬ್ಬರಿ 625. ಶೇ 1೦೦ ಅಂಕ ಅವರು ಪಡೆದಿದ್ದಾರೆ.

10 ಗಂಟೆ ವಿದ್ಯುತ್ ನೀಡಲು ರೈತರೇ ಬೇಡ ಎಂದಿದ್ದಾರೆ: ಕುಮಾರಸ್ವಾಮಿ10 ಗಂಟೆ ವಿದ್ಯುತ್ ನೀಡಲು ರೈತರೇ ಬೇಡ ಎಂದಿದ್ದಾರೆ: ಕುಮಾರಸ್ವಾಮಿ

ಮೊಹಮ್ಮದ್ ಕೈಫ್ ಅವರನ್ನು ಸನ್ಮಾನಿಸುವ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ, ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ವಿದ್ಯಾರ್ಥಿಯ ತಂದೆ ಹಾರೂನ್ ರಷೀದ್ ಮತ್ತು ತಾಯಿ ಪರ್ವೀನ್ ಅವರೂ ಇದ್ದರು.

English summary
CM Kumaraswamy today honered a student called Mohammed Kaif who took 100% marks in his SSLC exam early this year. He is from Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X