ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಸ್ಥಾನ ತೊರೆಯುವ ಬೆದರಿಕೆ ಹಾಕಿದ ರಮೇಶ್ ಕುಮಾರ್?

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಅರೋಗ್ಯ ಸಚಿವ ರಮೇಶ್ ಕುಮಾರ್ ರವರಿಂದ ಸಿದ್ದರಾಮಯ್ಯನವರಿಗೆ ಬೆದರಿಕೆ | Oneindia Kannada

ಬೆಳಗಾವಿ, ನವೆಂಬರ್ 14 : 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017' ಕುರಿತು ಕಾಂಗ್ರೆಸ್ ಪಕ್ಷದಲ್ಲಿಯೇ ಹಗ್ಗ-ಜಗ್ಗಾಟ ನಡೆಯುತ್ತಿದೆ. ಸಚಿವ ರಮೇಶ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.

ಸಚಿವ ರಮೇಶ್ ಕುಮಾರ್ ಗೆ ಖಾಸಗಿ ವೈದ್ಯರ ಬಹಿರಂಗ ಪತ್ರಸಚಿವ ರಮೇಶ್ ಕುಮಾರ್ ಗೆ ಖಾಸಗಿ ವೈದ್ಯರ ಬಹಿರಂಗ ಪತ್ರ

ಮಸೂದೆಯನ್ನು ಮಂಡನೆ ಮಾಡಬಾರದು ಎಂದು ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರದಿಂದ ಉಪವಾಸ ನಡೆಸಲಿದ್ದಾರೆ. ಸರ್ಕಾರದ ಜೊತೆ ವೈದ್ಯರು ನಡೆಸಿದ ಮಾತುಕತೆ ಫಲ ನೀಡಿಲ್ಲ.

KMPA act : Ramesh Kumar threatens to quit minister post

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದ್ದಲ್ಲಿಯೇ ಆರೋಗ್ಯ ಸಚಿವ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿ ವಿಧೇಯಕ ಮಂಡನೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮುರಿದುಬಿದ್ದ ಮಾತುಕತೆ : ವೈದ್ಯರಿಂದ ಉಪವಾಸ ಸತ್ಯಾಗ್ರಹಮುರಿದುಬಿದ್ದ ಮಾತುಕತೆ : ವೈದ್ಯರಿಂದ ಉಪವಾಸ ಸತ್ಯಾಗ್ರಹ

ವಿಧೇಯಕ ಮಂಡನೆಯಾಗದಿದ್ದರೆ ನಾನು ಸಚಿವ ಸ್ಥಾನ ತೊರೆಯುತ್ತೇನೆ ಎಂದು ಅವರು ಹೇಳಿದ್ದಾರೆ. ಯಾರದ್ದೋ ಪ್ರತಿಭಟನೆಗೆ ಹೆದರಿ ವಿಧೇಯಕ ಮಂಡನೆ ಆಗದಿದ್ದರೇ ಸರಿ ಹೋಗುವುದಿಲ್ಲ ಎಂದು ಸಿಎಂ ಬಳಿ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಬಗ್ಗೆ ಗೊತ್ತಿಲ್ಲ ಎಂದ ಆರೋಗ್ಯ ಸಚಿವಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಬಗ್ಗೆ ಗೊತ್ತಿಲ್ಲ ಎಂದ ಆರೋಗ್ಯ ಸಚಿವ

ಜನ ಸಾಮಾನ್ಯರನ್ನು ನೋಡಿಕೊಂಡು ವಿಧೇಯಕ ಸಿದ್ಧಗೊಳಿಸಲಾಗಿದೆ. ಸ್ಥಿತಿವಂತರ ಪರ ಸರ್ಕಾರ ನಿಲ್ಲಬಾರದು ಎಂದು ರಮೇಶ್ ಕುಮಾರ್ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದಾರೆ.

ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

ಮುಂದಿನ ವಾರ ವಿಧೇಯಕ ಮಂಡನೆ ಬಗ್ಗೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ಕೆಲವು ಶಾಸಕರು ವಿಧೇಯಕದ ಪರವಾಗಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

English summary
Karnataka Health minister Ramesh Kumar threatened to quit minister post if government not tabled Karnataka Private Medical Establishments (KPME) Act in winter session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X