ಬೆಳಗಾವಿ: ಸತೀಶ್ ಶುಗರ್ಸ್ ಎಂಡಿ ಮಗನ ಅಪಹರಣಕ್ಕೆ ವಿಫಲ ಯತ್ನ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 10: ಸಚಿವ ಸತೀಶ್ ಜಾರಕಿಹೊಳಿಗೆ ಸೇರಿದ ಸತೀಶ್ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರ ಮಗನ ಅಪಹರಣಕ್ಕೆ ವಿಫಲ ಯತ್ನ ನಡೆದಿದೆ.

ಸತೀಶ್ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಅವರ ಪುತ್ರ ಗೋಕಾಕ್ ತಾಲೂಕಿನ ಗೋಕಾಕ್ ಫಾಲ್ಸ್ ನಲ್ಲಿರುವ ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾನೆ.

Kidnapers tried to kidnap Satish Sugars MD’s son

ಮಂಗಳವಾರ ಸಂಜೆ ಶಾಲೆಯಿಂದ ಮಗುವನ್ನು ಚಾಲಕ ವಾಹನದಲ್ಲಿ ಕರೆ ತರುವಾಗ ಅಪಹರಣಕಾರರು ಕಾರು ಅಡ್ಡಗಟ್ಟಿದ್ದಾರೆ.

ಗೋಕಾಕ್ ಫಾಲ್ಸ್ ನ ಸೇತುವೆ ಮೇಲೆ ಕುಳಿತಿದ್ದ ಇಬ್ಬರು ಅಪಹರಣಕಾರರು ಕಾರನ್ನು ಅಡ್ಡಗಟ್ಟಿ ಚಾಲಕ ಮತ್ತು ಮಗುವಿಗೆ ಸ್ಪ್ರೇ ಮಾಡಿ ಕಾರಿನ ಕೀ ಕಸಿದುಕೊಂಡಿದ್ದಾರೆ. ನಂತರ ಕಾರಿನ ಕೀ ಎಸೆದು ಪರಾರಿಯಾಗಿದ್ದಾರೆ.

ಈ ಸಂಬಂಧ ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kidnapers failed to abduct 7 year old son Siddarth, managing director of Satish Sugars, here in Gokak on October 10.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ