ಎಂಟೇ ತಿಂಗಳಲ್ಲಿ ಸಚಿವರ ಪ್ರವಾಸದ ಖರ್ಚು 2.79 ಕೋಟಿನಾ.?

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 30: ರಾಜ್ಯದಲ್ಲಿ 32 ಸಚಿವರು ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಕೈಗೊಂಡ ಪ್ರವಾಸಕ್ಕೆ ಒಟ್ಟು ₹ 2.80ಕೋಟಿ ವೆಚ್ಚ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕೆ. ಗೋಪಾಲಯ್ಯ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ವೈಯಕ್ತಿಕವಾಗಿ ನನ್ನ ಪ್ರವಾಸಕ್ಕೆ 3,88 ಲಕ್ಷ ಆಗಿದೆ. ಇನ್ನು '2016ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ತಾವು ಹಾಗೂ ಸಚಿವ ಸಹೊದ್ಯೋಗಿಗಳು ಪ್ರಯಾಣಿಸಿರುವ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಾಗಿ ₹1.73ಕೋಟಿ ಪಾವತಿಸಲಾಗಿದೆ ಎಂದರು.[ರಾಜ್ಯಪಾಲ ವಾಲ ಅವರ ವಿಮಾನಯಾನ ಖರ್ಚು ವೆಚ್ಚ ಮಾಹಿತಿ ಬಹಿರಂಗ]

Karnataka state 32 mp's tour expense is Rs 7.29 corer in 8 month

ಸಚಿವರರುಗಳಾದ ಎಂ.ಬಿ. ಪಾಟೀಲ, ವಿನಯ್ ಕುಮಾರ್ ಸೊರಕೆ ಸತೀಶ್ ಜಾರಕೀ ಹೋಳಿ, ಟಿ.ಬಿ.ಜಯಚಂದ್ರ, ಉಮಾಶ್ರೀ ಸೇರಿದಂತೆ ಒಟ್ಟು 2.79 ಕೋಟಿ ಬಳಕೆಯಾಗಿದೆ ಎಂದರು.

ಪ್ರವಾಸ ಭತ್ಯೆ ಸಚಿವರ ಹೆಸರು ಮತ್ತು ಮೊತ್ತಗಳಲ್ಲಿ
1. ಎಸ್ ಆರ್. ಪಾಟೀಲ: 93,71,102
2. ಟಿ. ಬಿ. ಜಯಚಂದ್ರ: 27,30,216
3. ರಮಾನಾಥ ರೈ: 21,47,754
4. ಎಂ.ಬಿ. ಪಾಟೀಲ: 13,45,163
5. ವಿನಯ ಕುಲಕರ್ಣಿ: 13,82,986
6. ವಿನಯ್ ಕುಮಾರ್ ಸೊರಕೆ- 12,24,637
7. ಬಾಬುರಾವ್ ಚಿಂಚನಸೂರ್: 12,79,724
8. ಶಿವರಾಜ ತಂಗಡಗಿ: 12,17,980
9. ಕಿಮ್ಮನೆ ರತ್ನಾಕರ: 12,62,481
10. ಕೆ. ಅಭಯಚಂದ್ರ: 11,35,880
11. ಎಚ್.ಎಸ್. ಮಹದೇವ ಪ್ರಸಾದ್: 11,07,117
12. ಎಚ್.ಆಂಜನೇಯ: 10,27,047
13. ಸತೀಶ ಜಾರಕಿಹೊಳಿ: 9,09,962
14. ವಿ. ಶ್ರೀನಿವಾಸ ಪ್ರಸಾದ್: 8,57,376
15. ಕೃಷ್ಣ ಭೈರೇಗೌಡ- 9,52,436
16. ಡಿ.ಕೆ.ಶಿವಕುಮಾರ್- 9,33,977
17. ಎ. ಮಂಜು- 7,73,180
18. ಪಿ.ಟಿ. ಪರಮೇಶ್ವರ ನಾಯ್ಕ- 7,53,295
19. ಉಮಾಶ್ರೀ- 7,26,243
20. ಎಚ್.ಕೆ . ಪಾಟೀಲ: 6,87,062
21. ದಿನೇಶ್ ಗುಂಡೂರಾವ್- 6,08,008
22. ಖಮರುಲ್ ಇಸ್ಲಾಂ: 4,49,248
23. ಎಸ್.ಎಸ್. ಮಲ್ಲಿಕಾರ್ಜುನ- 4,78,090
24. ಎಚ್.ವೈ. ಮೇಟಿ- 4,83,250
25. ಶರಣ್ ಪ್ರಕಾಶ್ ಪಾಟೀಲ- 4,29,294
26. ರಾಮಲಿಂಗಾರೆಡ್ಡಿ- 3,27,271
27. ಮನೋಹರ ತಹಸೀಲ್ದಾರ- 3,59,065
28. ಶಾಮನೂರು ಶಿವಶಂಕರಪ್ಪ: 3,83,070
29. ಕೆ.ಎಂ.ರಮೇಶ್ ಕುಮಾರ್- 3,06,670
30. ಎಂ,ಎಚ್,ಅಂಬರೀಷ್-1,82,560
31. ಡಾ. ಎಚ್.ಸಿ. ಮಹಾದೇವಪ್ಪ-1,76,088
ಒಟ್ಟು ಸಿಎಂ ಸೇರಿದಂತೆ 32 ಸಚಿವರ ಪ್ರವಾಸಕ್ಕೆ 2,79,56,430 ಕೋಟಿ ಖರ್ಚಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka state 32 mp's tour money is rs 7.29 corer in eight month. foreign tour, helicopter other Expense's overall this.
Please Wait while comments are loading...