ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಠಗಳ ಮೇಲೆ ಹಿಡಿತಕ್ಕೆ ಸಜ್ಜಾದ ಸರ್ಕಾರ

By Mahesh
|
Google Oneindia Kannada News

ಬೆಳಗಾವಿ, ಡಿ.21: ಉತ್ತರಾಧಿಕಾರಿ ನೇಮಕ ವಿವಾದ, ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಮಠಗಳನ್ನು ತನ್ನ ಹತೋಟಿಗೆ ಕಾನೂನು ಪ್ರಕಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ವಿಧೇಯಕವೊಂದನ್ನು ಮಂಡನೆ ಮಾಡಿದೆ.

ಸೂಕ್ತ ನಿರ್ವಹಣೆ ಇಲ್ಲದ ಮಠ, ವಿವಾದಕ್ಕೆ ಸಿಲುಕಿರುವ ಮಠ, ಧಾಮಿಕ ಸಂಸ್ಥೆಗಳು ಹಾಗೂ ದೇಗುಲಗಳ ಸ್ವಾಧೀನಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014ನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಆದರೆ, ಇದೇ ಕಾನೂನು ಕ್ರೈಸ್ತ ಧಾರ್ಮಿಕ ಮಂದಿರ, ಮುಸ್ಲಿಂ ಆಲಯಗಳಿಗೆ ಅನ್ವಯಿಸುವುದಿಲ್ಲ.

ಬಿಜೆಪಿ ವಿರೋಧ: ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದ ವಿಧೇಯಕಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಮಠ-ಮಾನ್ಯಗಳನ್ನು ನಿಯಂತ್ರಣ ಮಾಡಲು ರಾಜ್ಯ ಸರಕಾರ ಮುಂದಾಗಿರುವುದು ಅಕ್ಷಮ್ಯ. ಇಂಥ ಕೆಲಸಕ್ಕೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಕೈಹಾಕಬಾರದು ಎಂದು ಆಕ್ಷೇಪಿಸಿದರು.

Bill for Takeover of Ailing Mutts

ವಿಧೇಯಕ ಏನು ಹೇಳುತ್ತದೆ: ಶನಿವಾರ ಮಂಡಿಸಲಾದ ವಿಧೇಯಕದಲ್ಲಿ ಹಿಂದಿನ 1997ರ ಕಾಯ್ದೆಯ 33ನೇ ವಿಧಿಗೆ ತಿದ್ದುಪಡಿ ತರಲಾಗಿದೆ. ವಿಧೇಯಕ ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದ ಬಳಿಕ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ.

ಪ್ರಸ್ತಾವಿತ ವಿಧೇಯಕ ಅನ್ವಯ ಯಾವುದೇ ಮಠಕ್ಕೆ ಉತ್ತರಾಧಿಕಾರಿ ಇಲ್ಲದಿದ್ದಾಗ, ಹಿಂದೆ ನೇಮಕಗೊಂಡಿದ್ದ ಉತ್ತರಾಧಿಕಾರಿ ದೈಹಿಕ, ಮಾನಸಿಕ ಅಶಕ್ತತೆಯಿಂದ ಬಳಲುತ್ತಿದ್ದರೆ, ಉತ್ತರಾಧಿಕಾರಿ ವಿವಾದ ಬಗೆಹರಿಯದಿದ್ದರೆ, ಮಠಾಧಿಪತಿ ಮರಣ ಹೊಂದಿದ ನಂತರ ವಿವಾದ ಸೃಷ್ಟಿಯಾಗಿ ಅಥವಾ ಮಠಾಧಿಪತಿಯೇ ಸ್ವಯಂ ಪ್ರೇರಿತವಾಗಿ ಸರಕಾರಕ್ಕೆ ಮಠದ ಆಡಳಿತವನ್ನು ಬಿಟ್ಟುಕೊಡಲು ಬಯಸಿದರೆ ಅಂಥ ಸಂದರ್ಭದಲ್ಲಿ ರಾಜ್ಯ ಸರಕಾರ ಮಠದ ಆಸ್ತಿ ಹಾಗೂ ಸ್ವತ್ತನ್ನು ಸ್ವಾಧೀನ ಪಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈವರೆಗೂ ಉತ್ತರಾಧಿಕಾರಿ ಸೇರಿದಂತೆ ಯಾವುದೇ ವಿವಾದಗಳಿದ್ದರೂ ಸರಕಾರ ಮಠಗಳ ತಂಟೆಗೆ ಹೋಗುವಂತಿರಲಿಲ್ಲ. ರಾಜ್ಯದಲ್ಲಿ ಹಲವಾರು ಮಠಗಳಲ್ಲಿ ಅವ್ಯವಹಾರ, ಅನಾಚಾರ ನಡೆದ ಆರೋಪ ಕೇಳಿ ಬಂದಾಗಲೂ ಸರಕಾರ ಮೂಕ ಪ್ರೇಕ್ಷಕನಂತಿತ್ತು. ಖಾಸಗಿ ದೇವಾಲಯಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಾಗಲೂ ಕ್ರಮ ಕೈಗೊಳ್ಳಲು ಅವಕಾಶವಿರಲಿಲ್ಲ.

English summary
The Siddaramaiah government tabled the Karnataka Hindu Religious Institutions and Charitable Endowments (Amendment) Bill of 2014, amid stiff opposition from the BJP, which termed it an attempt to interfere in the affairs of Hindu religious institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X