ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

15 ರೂ. ಟಿಕೆಟ್ ಪಡೆದು ಬಸ್ಸಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ

By ಅನುಷಾ ರವಿ
|
Google Oneindia Kannada News

Recommended Video

ಪಬ್ಲಿಕ್ ಟ್ರಾನ್ಸ್ಪೋರ್ಟ್ ಪ್ರೊಮೋಟ್ ಮಾಡಲು ಸಿದ್ದರಾಮಯ್ಯ ಬಸ್ ನಲ್ಲಿ ಪ್ರಯಾಣ | Oneindia Kannada

ಬೆಳಗಾವಿ, ನವೆಂಬರ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಮ್ಮ ಮಾದರಿ ನಡೆಯ ಮೂಲಕ ಗಮನ ಸೆಳೆದರು. ಮುಖ್ಯಮಂತ್ರಿಯಾಗಿದ್ದರೂ ಸ್ವತಃ ಬಸ್ಸಿನಲ್ಲಿ ಪ್ರಯಾಣಿಸಿ ಸಾಮಾನ್ಯ ಜನರ ಪಾಲಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು.

ಸೋಮವಾರ ಕರ್ನಾಟಕ ರಾಜ್ಯದಾದ್ಯಂತ 'ಬಸ್ ದಿನ' ಆಚರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಸುವರ್ಣ ಸೌಧದವರಗೆ ಬಸ್ಸಿನಲ್ಲೇ ಪ್ರಯಾಣಿಸಿದರು.

ತಮಗೆ ಮತ್ತು ತಮ್ಮ ಸಚಿವ ಸಂಪುಟದವರಿಗೆ ಮೀಸಲಾಗಿರಿಸಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಸುವರ್ಣ ಸೌಧದವರೆಗೆ ಬಂದು ನಂತರ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡರು

ಬಸ್ಸು ಬಳಸಿ ಮಾಲಿನ್ಯ ಉಳಿಸಿ

"ಜನರು ಬಸ್ಸುನ್ನು ಹೆಚ್ಚು ಬಳಸಬೇಕು. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ನಮ್ಮ ನಗರಗಳನ್ನು ಸ್ವಚ್ಛವಾಗಿಡಬಹುದು. ಸಾರ್ವಜನಿಕ ಸಾರಿಗೆ ಬಳಸುವಂತೆ ನಾವು ಜನರನ್ನು ಪ್ರೋತ್ಸಾಹಿಸುತ್ತೇವೆ," ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.

ನೋಟು ನೀಡಿ ಟಿಕೆಟ್ ಪಡೆದ ಸಿಎಂ

ನೋಟು ನೀಡಿ ಟಿಕೆಟ್ ಪಡೆದ ಸಿಎಂ

ಮುಖ್ಯಮಂತ್ರಿಗಳು ಬಸ್ ನಿರ್ವಾಹಕರಿಗೆ ನೋಟು ನೀಡಿದರು. ನಂತರ ಕಂಡಕ್ಟರ್ ಟಿಕೆಟ್ ಜತೆ ಚಿಲ್ಲರೆಯನ್ನು ಮುಖ್ಯಮಂತ್ರಿಗಳಿಗೆ ಮರಳಿಸಿದರು. ಸಿದ್ದರಾಮಯ್ಯ 15 ರೂಪಾಯಿಯ ಟಿಕೆಟ್ ನಲ್ಲಿ ಸಾಂಬ್ರಾ ನಿಲ್ದಾಣದಿಂದ ಸುವರ್ಣ ಸೌಧದವರೆಗೆ ಪ್ರಯಾಣಿಸಿದರು.

ಬಸ್ ಡೇ ಉದ್ಘಾಟಿಸಿದ ರೇವಣ್ಣ

ಬಸ್ ಡೇ ಉದ್ಘಾಟಿಸಿದ ರೇವಣ್ಣ

ಬೆಳಗಾವಿಯಲ್ಲಿ ಸೋಮವಾರ 'ಬಸ್ ದಿನ' ಉದ್ಘಾಟಿಸಿದ ಸಾರಿಗೆ ಸಚಿವ ಎಚ್.ಎಂ ರೇವಣ್ಣ, ಹೆಚ್ಚೆಚ್ಚು ಸಾರಿಗೆ ಬಸ್ ಗಳನ್ನು ಬಳಕೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.

ಬಸ್ ದಿನಕ್ಕೆ ಬೆಂಬಲ ನೀಡಿದ ಸಿಎಂ

ಬಸ್ ದಿನಕ್ಕೆ ಬೆಂಬಲ ನೀಡಿದ ಸಿಎಂ

ಸ್ವತಃ ತಾವೂ ಬಸ್ಸಲ್ಲಿ ಪ್ರಯಾಣಿಸಿ ಬಸ್ ದಿನಕ್ಕೆ ಸಿದ್ದರಾಮಯ್ಯ ಮತ್ತಷ್ಟು ಮೆರುಗು ತಂದರು. ವಾತಾವರಣಕ್ಕೆ ಕಾರ್ಬನ್ ಬಿಡುಗಡೆಯಾವುದನ್ನು ತಡೆಯಲು ಸಾರ್ವಜನಿಕ ಸಾರಿಗೆ ಬಳಸುವಂತೆ ಸರಕಾರ ಜನರಲ್ಲಿ ಮಾಡಿಕೊಳ್ಳುತ್ತಲೇ ಬರುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಬಸ್ ದಿನ ಆಚರಿಸಲಾಯಿತು.

English summary
Karnataka Chief Minister Siddaramaiah led by example on Monday when he hopped on to a bus to encourage public transport. While the bus was specially arranged for Siddaramaiah and his ministers, the Congress leader bought a ticket worth Rs 15 for the ride.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X