ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರ ಬೆಳಗಾವಿಯಲ್ಲಿ ಹೇಳಿದ್ದು, ಕೇಳಿದ್ದು!

|
Google Oneindia Kannada News

ಬೆಳಗಾವಿ, ಡಿ. 11 : ಪ್ರಭು ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್, ವಸತಿ ಸಚಿವ ಅಂಬರೀಶ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ಧರಣಿ ನಡೆಸಿದ್ದರಿಂದ ಗುರುವಾರದ ಕಲಾಪ ಯಾವುದೇ ಚರ್ಚೆ ನಡೆಯದೇ ಅಂತ್ಯಗೊಂಡಿದೆ. ಬೆಳಗ್ಗೆಯಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು.

ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಸುಗಮ ಕಲಾಪ ನಡೆಸಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನಡೆಸಿದ ಸರ್ವ ಪಕ್ಷಗಳ ಸಭೆಯೂ ವಿಫಲಗೊಂಡಿದ್ದು, ಉಭಯ ಪಕ್ಷಗಳ ವಾಕ್ಸಮರದಿಂದಾಗಿ ಕಲಾಪವನ್ನು ಶುಕ್ರವಾರ ಮುಂದೂಡಲಾಗಿದೆ. ಗುರುವಾರದ ಕಲಾಪದಲ್ಲಿ ಕೇಳಿಬಂದ ಹೇಳಿಕೆಗಳು ಇಲ್ಲಿವೆ. [ಗುರುವಾರದ ಕಲಾಪದ ಮುಖ್ಯಾಂಶಗಳು]

Day three quotes

ಈಶ್ವರಪ್ಪ, ಜಯಚಂದ್ರ ಜಟಾಪಟಿ : ಪ್ರಭು ಚೌವಾಣ್ ವಿಚಾರದಲ್ಲಿ ಪರಿಷತ್ತಿನಲ್ಲಿ ಕಾನೂನು ಸಚಿವ ಜಯಚಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, 'ಏಯ್ ಸುಮ್ನೆ ಕುತ್ಕೊಳ್ಳಪ್ಪ ಹೇಯ್ ದೊಡ್ ಮನುಷ್ಯಾ, ಯೋಗ್ಯತೆ ಇದೆಯೇನ್ರಿ ಇವ್ರಿಗೆ, ಯಾರ್ರೀ ಇವರಿಗೆ ಕಾನೂನು ಸಚಿವರನ್ನಾಗಿ ಮಾಡ್ದೋರೋ' ಎಂದು ಹೇಳಿದರು.

ಅದು-ಇದು ನೋಡೋದಕ್ಕೆ ಇಲ್ಲಿಗೆ ಬರಬಾರದು : 'ಅಶ್ಲೀಲ ಚಿತ್ರ ನೋಡುವುದು ನಾಗರಿಕ ಸಂಸ್ಕೃತಿಯಲ್ಲ, ಸದನದೊಳಗೆ ಮೊಬೈಲ್‌ನಲ್ಲಿ ಅದು-ಇದು ನೋಡುವುದು, ಎಸ್‌ಎಂಎಸ್ ಮಾಡುವುದು ಸರಿಯಲ್ಲ. ಸದನದೊಳಗೆ ಮೊಬೈಲ್ ನಿಷೇಧ ಮಾಡುವ ಕುರಿತು ಸಮಿತಿ ರಚಿಸುವುದರಿಂದ ಇದು ಸರಿಯಾಗದು. ನೈತಿಕ ಸಮಿತಿ ಕೇವಲ ಪೇಪರ್‌ನಲ್ಲಿ ಮಾತ್ರ ಕಾಣಬಾರದು, ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಸಿಎಂ ಪರಿಷತ್ತಿನಲ್ಲಿ ತಿಳಿಸಿದರು.

ಅಂಬರೀಶ್ ಮಾತು : ಸುವರ್ಣ ವಿಧಾನಸೌಧದ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿ ವಸತಿ ಸಚಿವ ಅಂಬರೀಶ್, 'ನಾನು ಖಾಸಗಿ ಜೀವನದಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದೇನೆ, ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದೇನೆ. ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. 3 ಅಲ್ಲ 350 ಜತೆ ಹುಡುಗಿಯರ ಜತೆ ಓಡಾಡಿದ್ದೇನೆ'. ತಮ್ಮ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿರುವ ಬಗ್ಗೆ ಅಂಬರೀಶ್ ನೀಡಿದ ಪ್ರತಿಕ್ರಿಯೆ ಇದು. [ಅಂಬರೀಶ್ ವಿರುದ್ಧ ದೂರು]

ಮಾಧ್ಯಮಗಳಿಗೆ ಆಹಾರವಾಗುತ್ತಿದ್ದೇವೆ : 'ಬುಧವಾರ ಸದನಲ್ಲಿ ನಡೆದ ಘಟನೆ ಎಲ್ಲರೂ ತಲೆ ತಗ್ಗಿಸುವಂತಹದ್ದು, ಶಾಸಕರಾಗಿ ನಮಗೆ ನಮ್ಮದೇ ಅದ ಜವಾಬ್ದಾರಿಗಳಿವೆ. ನಮ್ಮ ಇಂತಹ ವರ್ತನೆಯಿಂದ ಮಾಧ್ಯಮಗಳಿಗೆ ಆಹಾರವಾಗುತ್ತಿದ್ದೇವೆ. ಅವರು ನಮ್ಮನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ' ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೊಬೈಲ್ ತಂದರೆ ಕಸಿದುಕೊಳ್ಳುವೆ : ಪ್ರಭು ಚೌವಾಣ್ ಮೊಬೈಲ್ ಬಳಕೆ ಪ್ರಕರಣ ಸದನಲ್ಲಿ ಇಂದು ವಿಧಾನಪರಿಷತ್ತಿನಲ್ಲಿಯೂ ಪ್ರತಿಧ್ವನಿಸಿತು. 'ವಿಧಾನಪರಿಷತ್ ಸದಸ್ಯರು ಕಲಾಪಕ್ಕೆ ಮೊಬೈಲ್ ತಂದರೆ ಸ್ವಿಚ್ ಆಫ್‌ ಮಾಡಿ, ಮೊಬೈಲ್ ಬಳಸುವುದು ಕಂಡರೆ ಅದನ್ನು ಕಸಿದುಕೊಳ್ಳುವೆ. ಮೊಬೈಲ್ ವಾಪಸ್ ಕೊಡುವ ಬಗ್ಗೆ ನಂತರ ತೀರ್ಮಾನಿಸುತ್ತೇನೆ'.

English summary
10 days Karnataka Assembly winter session in Belagavi. Day three Thursday, December 11 quotes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X