ಕರೀಂಲಾಲ್ ತೆಲಗಿ ಶವ ಹುಟ್ಟೂರಾದ ಖಾನಾಪೂರಕ್ಕೆ ರವಾನೆ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 28 : ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಶವ ಹುಟ್ಟೂರು ಖಾನಾಪುರಕ್ಕೆ ತಂದಾಗ ಕುಟುಂಬಸ್ಥರ ಸಮ್ಮುಖದಲ್ಲೇ ಭಾರೀ ಜಟಾಪಟಿ ನಡೆದಿದೆ.

ಕರಿಂ ಲಾಲಾ ತೆಲಗಿ ಮಗಳು ಮತ್ತು ತೆಲಗಿ ತಮ್ಮನ ನಡುವೆ ಭಾರೀ ವಾಗ್ವಾದ ನಡೆದಿದೆ. ಆಸ್ತತ್ರೆಯಲ್ಲಿ ಇದ್ದಾಗ ನೋಡಲು ಬಾರದ ನೀವು ಈಗ ಅಂತ್ಯಕ್ರಿಯೆಗೆ ಬಂದಿದ್ದೆಕೆ? ಎಂದು ತೆಲಗಿ ಮಗಳು ಸನಾ ಚಿಕ್ಕಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಕರಿಂ ಲಾಲ ಹೆಣವನ್ನ ನೋಡಲು ಬರಬೇಡ ಎಂದು ಮಗಳು ತಾಕೀತು ಮಾಡಿದ್ದಾರೆ. ಆಗ ಕರೀಂ ಲಾಲಾ ಅಳಿಯ ಇರ್ಫಾನ್ ತಾಳಿಕೋಟಿ ಮತ್ತು ಲಾಲಾನ ತಮ್ಮ ಅಜೀಂ ತೆಲಗಿ ನಡುವೆ ಜಗಳಾಟ ಶುರುವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ತೆಲಗಿ ಜೊತೆ ಸತ್ತುಹೋದ ಛಾಪಾಕಾಗದ ಹಗರಣದ ಹೊರಬರದ ನಗ್ನ ಸತ್ಯಗಳು!

Karim Lal Telgi dead body shifted to birthplace Khanapur

ಬಹುಕೋಟಿ (32 ಸಾವಿರ ಕೋಟಿ ರು.) ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ (56) ಗುರುವಾರ ಬಹು ಅಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fake paper scandal main accused Abdul Karim Lal Telgi dead body shifted to birthplace Khanapur, Belagavi district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ