ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಕಡ್ಡಾಯ : ಸಿದ್ಧರಾಮಯ್ಯ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್, 1: ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಗೆ ತಿಳಿಸಿದರು.

"ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಸಹ ಪ್ರತಿ ವರ್ಷ 12 ವಾರಗಳಿಗೆ ಕಡಿಮೆ ಇಲ್ಲದಂತೆ ಕನ್ನಡ ಚಲನಚಿತ್ರ ಪ್ರದರ್ಶಿಸಬೇಕೆಂಬ ನಿಬಂಧನೆಯನ್ನು ಪರವಾನಿಗೆಯಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದರು.

Kannada movies shows compulsory in multiplex theaters: Siddaramaiah

ವಾಣಿಜ್ಯ ತೆರಿಗೆಗಳ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಮನರಂಜನಾರ ತೆರಿಗೆ ಕಾಯ್ದೆ 1958 ರ ಪ್ರಕರಣ 3- ಸಿ ಅನ್ವಯ ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರ ಪ್ರದರ್ಶನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ಕಟ್ಟಲಾದ ಚಲನಚಿತ್ರ ಮಂದಿರಗಳಿಗೆ ಮೊದಲ ಪ್ರದರ್ಶನದಿಂದ 3 ವರ್ಷದವರೆಗೆ ಮನರಂಜನಾ ತೆರಿಗೆಯನ್ನು ವಿನಾಯಿತಿ ಮಾಡಲಾಗಿದೆ. ಎಂದು ಅವರು ಹೇಳಿದರು.

ವಿನಾಯಿತಿ ಪಡೆದ ಚಿತ್ರಮಂದಿರಗಳು ವರ್ಷದಲ್ಲಿ ಕನಿಷ್ಠ ಶೇ.75 ರಷ್ಟು ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸಬೇಕೆಂದು ನಿಬಂಧನೆ ಹಾಕಾಲಾಗಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದೇ ನಿಯಮ ಅನ್ವಯಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada movies exhibition compulsory in multiplex theaters, CM Siddaramaiah says in Belagavi Suvarna vidhanasoudha winter session on Thursday.
Please Wait while comments are loading...