ಕಲ್ಲಪ್ಪ ಹಂಡಿಭಾಗ್ ಅವರ ಸೋದರ ಯಲ್ಲಪ್ಪ ಆತ್ಮಹತ್ಯೆ

Posted By:
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 28: ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಭಾಗ್ ಅವರ ಸಾವಿನ ಪ್ರಕರಣದ ನಿಗೂಢತೆ ಬಯಲಾಗುವ ಮುನ್ನವೇ ಅವರ ಕುಟುಂಬದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಲ್ಲಪ್ಪ ಅವರ ಸೋದರ ಕಾನ್ಸ್ ಟೇಬಲ್ ಯಲ್ಲಪ್ಪ ಹಂಡಿಭಾಗ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಹಂದಿಗುಂದದಲ್ಲಿ ಶುಕ್ರವಾರ ನಡೆಯಲಿದೆ.

ಯಲ್ಲಪ್ಪ ಹಂಡಿಭಾಗ್(28) ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕುಲಗೋಡು ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಕಾರಣ ನಿಗೂಢವಾಗಿಯೇ ಉಳಿದಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Kallappa Handibagh brother Constable Yellappa commits suicide

'ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ. ಕಲ್ಲಪ್ಪ ಹೋದ ಈಗ ಯಲ್ಲಪ್ಪನನ್ನು ಕಳೆದುಕೊಂಡೆವು' ಎಂದು ಯಲ್ಲಪ್ಪ ಅವರ ತಂದೆ ಬಸಪ್ಪ ಕಣ್ಣೀರಿಟ್ಟಿದ್ದಾರೆ. ಯಲ್ಲಪ್ಪ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿ ಎಂದು ಇಚ್ಛಿಸಿದ್ದಾರೆ.

ಕಿತ್ತೂರು ಉತ್ಸವದ ಡ್ಯೂಟಿಗೆ ತೆರಳಿದ್ದ ಯಲ್ಲಪ್ಪ ಅವರು ಮನೆಗೆ ಮರಳಿದ ಬಳಿಕ ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಲ್ಲಪ್ಪ ಅವರ ಮನೆಗೆ ಗೋಕಾಕ್ ಡಿವೈಎಸ್ಪಿ ವೀರಭದ್ರಯ್ಯ, ಎಸ್ಪಿ ರವಿಕಾಂತೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gokak police constable Yellappa Handibag, brother of then Chikkamagaluru DySP Kallappa Handibag, committed suicide by hanging on Thursday, October 27.
Please Wait while comments are loading...