ಜಾರಕಿಹೊಳಿ ಸಹೋದರರ ಮನೆ ಮೇಲೆ ಮುಂದುವರೆದ ಐಟಿ ದಾಳಿ

Written By: Ramesh
Subscribe to Oneindia Kannada

ಬೆಳಗಾವಿ, ಜನವರಿ. 20 : ಸಣ್ಣ ಕೈಗಾರಿಕೋದ್ಯಮ ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಗುರುವಾರ (ಜ.19) ದಾಳಿ ಮಾಡಿದ್ದ ಆದಾತ ತೆರಿಗೆ ಅಧಿಕಾರಿಗಳು ಶುಕ್ರವಾರವೂ ಅವರ ಸಹೋದರ ಲಖನ್ ಜಾರಕಿಹೊಳಿ ಅವರ ಮೆನೆ ಮೇಲೆ ದಾಳಿ ಮಾಡಿದ್ದಾರೆ.

ಗೋಕಾಕನಲ್ಲಿರುವ ಲಖನ್ ಜಾರಕಿಹೊಳಿ ಅವರ ಮನೆಗೆ ದಾಳಿ ಮಾಡಿದ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರೀಶಿಲನೆ ನಡೆಸಿದ್ದಾರೆ. ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದು. ಸಕ್ಕರೆ ಕಾರ್ಖಾನೆ, ಬಾರ್ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಐನೂರು-ಸಾವಿರ ಮುಖ ಬೆಲೆ ನೋಟುಗಳು ರದ್ದಾದ ಮೇಲೆ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ ಅವರ ವಿವಾಹ ಗೋಕಾಕದ ಮಯೂರ ಶಾಲೆಯ ಮೈದಾನದಲ್ಲಿ ಅದ್ಧೂರಿಯಿಂದ ನಡೆದಿತ್ತು.[ಕಾಂಗ್ರೆಸ್ ನಾಯಕರ ಕಚೇರಿ, ಮನೆಯ ಮೇಲೆ ಐಟಿದಾಳಿ]

IT raids on houses of Ramesh Jarkiholi, brother

ನೋಟು ರದ್ದಾಗಿದ್ದರೂ ಇಷ್ಟು ಅದ್ಧೂರಿಯಾಗಿ ಮದುವೆ ಮಾಡಲು ಹಣ ಅಲ್ಲಿಂದ ಬಂತು ಎಂಬ ಮಾತುಗಳು ಕೇಳಿ ಬಂದಿದ್ದವು.

ಸಣ್ಣ ಕೈಗಾರಿಕೋದ್ಯಮ ಸಚಿವ ರಮೇಶ್ ಜಾರಕಿಹೊಳಿ, ಮತ್ತೊಬ್ಬ ನಾಯಕ ಜಾವೇದ್ ಮುಲ್ಲಾ ಮತ್ತು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲೆ ಗೋವಾ ಮತ್ತು ಕರ್ನಾಟಕ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The politically powerful Jarkiholi family woke up to a shock on Thursday as the Income Tax (I-T) Department conducted simultaneous raids on the residences of Small Scale Industries Minister Ramesh Jarkiholi and his brother Lakhan at Gokak on Friday.
Please Wait while comments are loading...