ಐಟಿ ದಾಳಿ: ಸದನದಲ್ಲಿ ಗದ್ದಲ, ಪರಂ- ಈಶ್ವರಪ್ಪ ವಾಗ್ದಾಳಿ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 2: ಬೆಂಗಳೂರಿನಲ್ಲಿ ಐಟಿ ದಾಳಿಯಿಂದ ರು 4.7 ಕೋಟಿಯಷ್ಟು ಹೊಸ ನಗದು ಸೇರಿ ಒಟ್ಟು 6 ಕೋಟಿ, 7 ಕೆಜಿ ಚಿನ್ನವನ್ನು ಹೊಂದಿರುವ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಬೆಳಗಾವಿ ಸದನದಲ್ಲಿ ಭಾರಿ ಚರ್ಚೆ ನಡೆಯಿತು.

ಬೆಳಗಾವಿಯಲ್ಲಿ ಶುಕ್ರವಾರ ಬೆಳಗ್ಗೆ ಚಳಿಗಾಳಿಗಾಲದ ಅಧಿವೇಶನದಲ್ಲಿ ಐಟಿ ದಾಳಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸದನದಲ್ಲಿ ಜಿಜೆಪಿ ಮುಖಂಡರು ಪತ್ರಿಕೆಗಳಲ್ಲಿ ಬಂದಿರುವುದನ್ನು ಕಾಂಗ್ರೆಸ್ ಮುಖಂಡರ ವಿರುದ್ಧ ಎತ್ತಿತೊರಿಸಿ ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಗಮದ ಮುಖ್ಯಾಧಿಕಾರಿ ಜಯಚಂದ್ರ ಅವರಿಗೆ ಇಷ್ಟೊಂದು ಮೊತ್ತದ ಕಪ್ಪುಹಣ ಹೇಗೆ ಬಂತು ಎಂದು ಪ್ರಶ್ನೆ ಮಾಡಿದರು.[ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]

IT raid: meeting on winter session in belgaum

ಇದಕ್ಕೆ ಉತ್ತರಿಸಲು ಮುಂದಾದ ಕೆಪಿಸಿಸಿ ರಾಜ್ಯಾಧ್ಯಕ್ಷ ಮತ್ತು ಗೃಹಸಚಿವ ಜಿ. ಪರಮೇಶ್ವರ ಇದರ ಬಗ್ಗೆ ಪೂರ್ಣ ಮಾಹಿತಿ ನನಗೆ ತಲುಪಿಲ್ಲ, ಈ ವರೆಗೂ ತನಿಖೆ ನಡೆಯುತ್ತಲೇ ಇದೆ ಎಂದು ಹೇಳಿದರು.

ಸಿಎಂ ಆಪ್ತರ ಮನೆಯಲ್ಲಿ ಕೋಟಿಗಟ್ಟಲೆ ಹಣ ಹೇಗೆ ಬರುತ್ತದೆ ನಿಮ್ಮದು ಸುವ್ಯವಸ್ಥಿತವಾದ ಸರ್ಕಾರ ಎಂದು ಹೇಳಿಕೊಳ್ಳುತ್ತೀರಾ, ಪತ್ರಿಕೆಗಳಲ್ಲಿ ಬಂದಿರುವುದು ತಪ್ಪೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಜನರು ಕೇವಲ 2000 ರುಪಾಯಿಗಾಗಿ ಸಾಲಿನಲ್ಲಿ ನಿಂತು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 4.7 ಕೋಟಿ ಸಾಮಾನ್ಯವಾದ ಹಣವಲ್ಲ ಆ ಹಣದಿಂದ ಎಷ್ಟೋ ಬಡವರಿಗೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು. ಮಾಹಿತಿ ಬರುವುದಕ್ಕೆ ಕಾದು ಕುಳಿತೆ ನಾವು ಸರ್ಕಾರ ಮತ್ತು ನಿಮ್ಮ ಮೇಲೆ ಅನುಮಾನ ಪಡೆಬೇಕಾಗುತ್ತದೆ. ಈ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿದೆಯೆಂದು ತಿಳಿಯಬೇಕಾಗುತ್ತದೆ ಎಂದು ತಿಳಿಸಿದರು.[ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]

IT raid: meeting on winter session in belgaum

ಇದಕ್ಕೆ ಪರಮೇಶ್ವರ್ ಗರಂ ಆಗಿ ಸಭಾಪತಿಗಳ ಎದುರು ಪ್ರತಿಪಕ್ಷಗಳಿಗೆ ಪೂರ್ಣ ವರದಿ ಸಿಗುವವರೆಗೂ ಕಾಯಬೇಕು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಮಾತಾಡಬಾರದು, ನೀವು ಹೇಳಿದ ಎಲ್ಲವನ್ನು ನಾವು ಈವರೆಗೆ ಮಾನ್ಯಮಾಡಿದ್ದೇವೆ, ಸ್ಪಲ್ಪ ಸಮಯ ಕಾಯಿರಿ ಎಂದು ಹೇಳಿದರು.

ತನಿಖೆ ಸರಿಯಾಗಿಯಾಗಿ ನಡೆಯುತ್ತದೆಯೋ ಇಲ್ಲವೋ ಎಂದು ಕೆಲವು ಸದಸ್ಯರು ಸಿಬಿಐಗೆ ಒಪ್ಪಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದರು.

ಕಾಗೋಡು ತಿಮ್ಮಪ್ಪ, ಆರ್.ವಿ. ದೇಶಪಾಂಡೆ ಮುಂತಾದ ಕಾಂಗ್ರೆಸ್ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

IT raid: meeting on winter session in belgaum

ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸದನದಲ್ಲಿ ಐಟಿ ದಾಳಿಗೆ ಸಂಬಂಧಿಸಿದ ಜೆರಾಕ್ಸ್ ಪ್ರತಿಯೊಂದನ್ನು ಎಲ್ಲರಿಗೂ ಪ್ರದರ್ಶನ ಮಾಡಿ ಸರ್ಕಾರ ಎಷ್ಟು ಪಾರದರ್ಶಕವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದರು. ಅಲ್ಲದೆ ಉನ್ನತ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
IT raid on two individuals at Bengaluru has led to a major seizure of up to Rs 4.7 crore in cash which were largely new notes. This issue take on winter session in belagavi. Home minister G. Parameshwar and BJP leader Eshwarappa talk together Controversy
Please Wait while comments are loading...