ವೈ.ಎಸ್.ವಿ.ದತ್ತಾ ಮಾತು ಕೇಳಲ್ವಾ ದೇವೇಗೌಡ್ರು?

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 17 : ಜೆಡಿಎಸ್ ನ ಹಿರಿಯ ಮುಖಂಡ ಶಾಸಕ ವೈ.ಎಸ್.ವಿ ದತ್ತಾ ಅವರ ಮಾತನ್ನು ಅವರ ಪಕ್ಷದ ರಾಷ್ಟ್ರೀಯ ದೇವೇಗೌಡ ಅವರು ಕೇಳೋದಿಲ್ವಂತೆ.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಹೀಗಂತ ಹೇಳಿದ್ದು ದತ್ತ ಅವರಲ್ಲ, ಸಿ.ಎಂ ಸಿದ್ದರಾಮಯ್ಯ ಅವರು. ಆದರೆ ದತ್ತಾ ಅವರ ಮಾತು ಕೇಳದ ದೇವೇಗೌಡರು ಸಿದ್ದರಾಮಯ್ಯ ಅವರ ಮಾತನ್ನು ಕೇಳುತ್ತಾರಂತೆ.

Intresting debate around Devegowda and Y.S.V.Datha

ದೇವೇಗೌಡ ಅವರು ಯಾರ ಮಾತು ಕೇಳುತ್ತಾರೆ ಎಂಬ ಚರ್ಚೆ ಪ್ರಾರಂಭವಾಗಿದ್ದು ಕೃಷ್ಣಭೈರೇಗೌಡ ಅವರಿಂದ.

ಸಿದ್ದರಾಮಯ್ಯ ವಿರುದ್ಧ ಅತೃಪ್ತರಿಂದ ಹೈಕಮಾಂಡ್‌ಗೆ ದೂರು

ಸದನದಲ್ಲಿ ಕೃಷಿ ಸಂಬಂಧಿತ ಪ್ರಶ್ನೆಗೆ ಉತ್ತರಿಸುತ್ತಾ ಕೃಷ್ಣಭೈರೇಗೌಡ ಅವರು 'ಬೆಂಬಲ ಬೆಲೆಗೆ ಮೆಕ್ಕೆಜೊಳ ಖರೀದಿ ಮಾಡಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ, ಕೇಂದ್ರದ ಕೃಷಿ ಸಚಿವರನ್ನ ಭೇಟಿ ವಿಷಯ ತಿಳಿಸಿದ್ದೇವೆ, ರಾಜ್ಯ ಬಿ.ಜೆ.ಪಿ ಮುಖಂಡರು ಕೇಂದ್ರದರ ಮೇಲೆ ಒತ್ತಡ ಹೇರಿ ಬೆಂಬಲ ಬೆಲೆಗೆ ಕೊಳ್ಳುವಂತೆ ಮಾಡಬೇಕು ಎಂದರು.

ಈ ನಡುವೆ ಮಧ್ಯ ಪ್ರವೇಶ ಮಾಡಿದ ವೈ.ಎಸ್.ವಿ.ದತ್ತಾ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಇದೇ ವಿಷಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ ಎಂದರು.

Intresting debate around Devegowda and Y.S.V.Datha

ದತ್ತಾ ಅವರ ಮಾತನ್ನು ಅರ್ಧಕ್ಕೆ ತುಂಡರಿಸಿ ಮಾತನಾಡಿದ ಸಿದ್ದರಾಮಯ್ಯ ಅವರು "ಬೆಳೆ ನೋಡಿ ಪೊಟೊ ತೆಗೆಸಿಕೊಂಡು ಬಿಟ್ರೆ ಆಗಲ್ಲ, ದೆಹಲಿ ಹೋಗಿ ಒತ್ತಡ ಹಾಕಲು ಹೇಳಿ' ಎಂದರು.

ನಂತರ ತಾವೇ ಮುಂದುವರೆಸಿ "ದೇವೇಗೌಡರು ಈಗ ನಿಮ್ಮ ಮಾತು ಕೇಳಲ್ಲ ಬಿಡಿ' ಎಂದು ವ್ಯಂಗ್ಯ ಮಾಡಿದರು.

ಇದಕ್ಕೆ ಎದುರುತ್ತರ ನೀಡಿದ ದತ್ತಾ ಅವರು "ನನ್ನ ಮಾತು ಕೇಳದಿದ್ದರೇನಂತೆ ನಿಮ್ಮ ಮಾತು ಕೇಳುತ್ತಾರಲ್ಲ, ನೀವೆ ಹೇಳಿ ಅವರಿಗೆ' ಎಂದರು. ಇದಕ್ಕೆ ಹೌದು ಎನ್ನುವಂತೆ ಸಿ.ಎಂ ತಲೆ ಆಡಿಸಿದರು.

Intresting debate around Devegowda and Y.S.V.Datha

ಕೇಂದ್ರ ಕೃಷಿ ಸಚಿವರು ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ಹಂಚಿಕೆ ಮಾಡುವುದಾದರೆ ಖರೀದಿ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಮೆಕ್ಕೆಜೋಳವನ್ನು ಆಹಾರವಾಗಿ ಬಳಸುವುದಿಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಆದರೆ ಕೇಂದ್ರ ಕೃಷಿ ಸಚಿವರು ಜೋಳ ಖರೀದಿಯ ಬಗ್ಗೆ ಖಚಿತವಾಗಿ ತಿಳಿಸದೆ, ನೋಡುತ್ತೇವೆ ಎಂದಷ್ಟೆ ಹೇಳಿದ್ದಾರೆ ಎಂದರು ಕೃಷ್ಣಭೈರೇಗೌಡ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some itresting talks about Devegowda held in assembly today. CM says Devegowda is not listning to Y.S.V.Datha's words. as to reply to it Datha says Devegowda now listning to CM's words.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ