ಬೆಳಗಾವಿ: ಬಾನಂಗಳದಲ್ಲಿ ಹಾರಿದ ನಗ್ನ ಚಿತ್ರವುಳ್ಳ ಗಾಳಿಪಟ

Posted By:
Subscribe to Oneindia Kannada

ಬೆಳಗಾವಿ, ಜನವರಿ 22: ಬಿಜೆಪಿ ಮಾಜಿ ಶಾಸಕ, ಪರಿವರ್ತನಾ ಪರಿವಾರ ಸಂಸ್ಥಾಪಕ ಅಭಯ ಪಾಟೀಲ ಆಯೋಜನೆಯ ಗಾಳಿಪಟ ಉತ್ಸವದ ಉದ್ಘಾಟನಾ ದಿನವೇ ಭಾರಿ ಮುಜುಗರಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ.

ಶನಿವಾರದಂದು ಇಲ್ಲಿನ ನಾನಾವಡಿ-ಸವಗಾಂವ್ ರಸ್ತೆಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ಮೈದಾನದಲ್ಲಿ 7ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಲಾಯಿತು.

Belagavi International Kite Festival 2017 : A Kite from Germany irks Public

ಮೊದಲ ದಿನದಂದು ಜರ್ಮನಿಯಿಂದ ಬಂದಿದ್ದ ಉತ್ಸಾಹಿಯೊಬ್ಬರು ಆಗಸಕ್ಕೆ ಹಾರಾಡಲು ಬಿಟ್ಟ ಗಾಳಿಪಟದಲ್ಲಿ ಮಹಿಳೆಯ ನಗ್ನ ಚಿತ್ರವಿತ್ತು. ಇದು ಅಲ್ಲಿ ನೆರೆದಿದ್ದವರಿಗೆ, ಸಾರ್ವಜನಿನ್ಕರಿಗೆ ತೀವ್ರ ಮುಜುಗರ ಉಂಟು ಮಾಡಿತು.

Belagavi International Kite Festival 2017 : A Kite from Germany irks Public

ಜರ್ಮನ್‌ ದೇಶದ ಪ್ಲಾಯರ್ ಏಕ್ಸ್ಲ್ ಕೋಸ್ಟ್ರೋಸ್ ಎಂಬಾತ ನಗ್ನ ಚಿತ್ರವಿರುವ ಗಾಳಿಪಟ ಹಾರಿಸಿದ ವ್ಯಕ್ತಿ. ಈತ ಜರ್ಮನಿಯ ಖ್ಯಾತ ಕಲಾವಿದರಾದ ಮೈಲೀನ್ ಫರೇರ್ ಅವರ ನಗ್ನ ಚಿತ್ರವಿರುವ ಪಟವನ್ನು ಹಾರಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಕೆನಡಾ, ಯುಕೆ, ಜರ್ಮನಿ, ಮಲೇಷ್ಯಾ, ರಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ದಕ್ಷಿಣ ಆಫ್ರಿಕಾ, ಸಿಂಗಾಪುರ ಸೇರಿದಂತೆ 25 ದೇಶಗಳ ವಿವಿಧ ತಂಡಗಳು ಈ ಉತ್ಸವದಲ್ಲಿ ಪಾಲ್ಗೊಂಡಿವೆ. ಕೊಚ್ಚಿ, ಅಹಮದಾಬಾದ್, ವಡೋದರಾ, ಮುಂಬೈ, ನಾಗ್ಪುರ್, ಬೆಂಗಳೂರು, ಕೋಲ್ಕತ್ತಾ, ದೊಡ್ಡಬಳ್ಳಾಪುರ, ಪಣಜಿಯ ಲಕ್ಷಾಂತರ ಜನರು ಈ ಗಾಳಿಪಟ ಉತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Belagavi International Kite Festival 2017 : A Kite having nude picture of a girl belonging to a German irked public on the inauguration today(Jan.21)
Please Wait while comments are loading...