ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಡಿ ಜಿಲ್ಲೆ ಬೆಳಗಾವಿ ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ | Oneindia Kannada

ಬೆಳಗಾವಿ, ಆಗಸ್ಟ್.28: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾಗಿದ್ದು, ಕೈ ಭಿನ್ನಮತ ಭುಗಿಲೆದ್ದಿದೆ.

ಹೌದು, ಇಂದು ಮಂಗಳವಾರ ನಡೆಯಬೇಕಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಈಗ ಮುಂದೂಡಿರುವುದೇ ಲಕ್ಷ್ಮಿ ಹೆಬ್ಬಾಳಕರ ಮತ್ತು ಸತೀಶ ಜಾರಕಿಹೊಳಿ ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ.

19 ಮಂದಿಯನ್ನು ಉಚ್ಛಾಟಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್19 ಮಂದಿಯನ್ನು ಉಚ್ಛಾಟಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್

ಚುನಾವಣೆ ಮುಂದೂಡಲು ಬೆಳಗಾವಿ ತಹಸೀಲ್ದಾರ ಮಂಜುಳಾ ಅವರು ಕಾನೂನು ಸುವ್ಯವಸ್ಥೆ ಕಾರಣವನ್ನು ನೀಡಿದ್ದಾರೆ. ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ನಿಂದ 14 ಸದಸ್ಯರ ಬಲಗಳಲ್ಲಿ 9 ಜನರು ಲಕ್ಷ್ಮಿ ಹೆಬ್ಬಾಳಕರ ಜೊತೆಗೆ ಇದ್ದಾರೆ.

In Belgaum has again disagreed in the Congress party

ಆದ್ರೂ ಪರಶುರಾಮ ಪಾಟೀಲ್ ಸೇರಿ ನಾಲ್ವರು ನಿರ್ದೇಶಕರನ್ನ ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಇವೆರೆಡು ವಿಚಾರ ಗೊತ್ತಾಗುತ್ತಿದ್ದಂತೆ ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ತಹಸೀಲ್ದಾರ ಕಚೇರಿ ಎದುರು 9 ಜನ ನಿರ್ದೇಶಕರು ಸೇರಿದಂತೆ ನೂರಾರು ಜನ ಬೆಂಬಲಿಗರೊಂದಿಗೆ ಪ್ರತಿಭಟನೆ ಆರಂಭಿಸಿದರು.

ಸಿದ್ದರಾಮಯ್ಯ ಅವರ ಹೊಗಳಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ ಕೈ ಶಾಸಕಸಿದ್ದರಾಮಯ್ಯ ಅವರ ಹೊಗಳಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ ಕೈ ಶಾಸಕ

ಹೆಬ್ಬಾಳಕರ ಅಹೋರಾತ್ರಿ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಇತ್ತ ಸತೀಶ ಜಾರಕಿಹೊಳಿ ಬೆಂಬಲಿಗರೂ ಸಹ ಬೆಳಗಾವಿ ತಹಸೀಲ್ದಾರ ಕಚೇರಿಯ ಗೇಟ್ ಹೊರಕ್ಕೆ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಎರಡು ಬಣದ ಮುಖಂಡರು, ಕಾರ್ಯಕರ್ತರು ಪರಸ್ಪರ ಘೋಷಣೆ ಹಾಕಿದರು.

In Belgaum has again disagreed in the Congress party

ಜಾರಕಿಹೊಳಿ ಬೆಂಬಲಿಗರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಜಾರಕಿಹೊಳಿ ಬೆಂಬಲಿಗರು ಹೆಬ್ಬಾಳಕರಗೆ ಧಿಕ್ಕಾರ ಕೂಗಿದ್ರೆ ಇತ್ತ ತಹಸೀಲ್ದಾರ ಮಂಜುಳಾ ಹೇಗೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ನಿಗದಿಯಂತೆ ಇವತ್ತೆ ಚುನಾವಣೆ ನಡೆಸಲು ಹೆಬ್ಬಾಳಕರ ಪಟ್ಟು ಹಿಡಿದರು.

ಆದ್ರೆ ಬೆಳಗಾವಿ ಕಮಿಷನರ್ ಡಾ. ಡಿ.ಸಿ. ರಾಜಪ್ಪ, ಬೆಳಗಾವಿ ಎಡಿಸಿ ಬೂದೇಪ್ಪ ಪ್ರತಿಭಟನಾಕಾರರಿಗೆ ಭರವಸೆ ನೀಡಿ ಪರಿಸ್ಥಿಯನ್ನು ತಿಳಿಗೊಳಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳಕರ, ಇದರಲ್ಲಿ ರಾಜಕೀಯ ವಿರೋಧಿಗಳ ಕಾಣದ ಕೈಗಳ ಕೈವಾಡವಿದೆ. ನನಗೆ ಅನ್ಯಾಯವಾಗಿದೆ.

'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ''ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'

ನನಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಬಿಡುವುದಿಲ್ಲ. ನಾನೊಬ್ಬಳು ಲಿಂಗಾಯತ ನಾಯಕಿಯಾಗಿ ಬೆಳೆಯಲು ಕೆಲವರು ಬಿಡುತ್ತಿಲ್ಲ. ಇದನೆಲ್ಲವನ್ನೂ ಲಿಂಗಾಯತ ಸಮುದಾಯದವರು ಮತ್ತು ಕ್ಷೇತ್ರದ ಜನರು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

English summary
The border district in Belgaum has again disagreed in the Congress party. Lakshmi hebbalkar and Satish Jarkiholi Fight was once again revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X