ಜೆಡಿಎಸ್ ಸೇರುವ ಕುರಿತು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada
   ಬಿಜೆಪಿ ಬಿಡೋದಿಲ್ಲ, ಜೆಡಿಎಸ್ ಸೇರೋದಿಲ್ಲ ಎಂದ ಬಾಲಚಂದ್ರ ಜಾರಕಿಹೋಳಿ | Oneindia Kannada

   ಬೆಳಗಾವಿ, ಫೆಬ್ರವರಿ 12 : 'ನಾನು ಬಿಜೆಪಿ ತೊರೆಯುವುದಿಲ್ಲ. ಈ ಬಾರಿಯೂ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದೇನೆ' ಎಂದು ಮಾಜಿ ಸಚಿವ, ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

   ಬೆಳಗಾವಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, 'ನಾನು ಜೆಡಿಎಸ್‌ ಪಕ್ಷವನ್ನು ಸೇರುತ್ತಿಲ್ಲ. ಜೆಡಿಎಸ್ ಸೇರಲಿದ್ದೇನೆ ಎನ್ನುವ ಸುದ್ದಿ ಸುಳ್ಳು' ಎಂದು ಹೇಳಿದರು.

   ಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿ

   'ಚುನಾವಣೆ ಸಂದರ್ಭದಲ್ಲಿ ಇಂತಹ ಗಾಳಿ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಗಾಳಿ ಸುದ್ದಿಗಳಿಗೆ ಯಾರು ಕಿವಿಗೊಡಬಾರದು. ಈ ಬಾರಿಯೂ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವೆ' ಎಂದರು.

   I will not quit BJP says Balachandra Jarkiholi

   'ಈಗಾಗಲೇ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇನೆ. ಒಂದು ಸುತ್ತಿನ ಪ್ರಚಾರ ಕಾರ್ಯ ಮುಕ್ತಾಯವಾಗಿದೆ. ಕಳೆದ ಬಾರಿ 75 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಲಖನ ಜಾರಕಿಹೊಳಿ

   2013ರ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು 99,283 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಉಟಗಿ ರಾಮಪ್ಪ ಕರೆಪ್ಪ 24,062 ಮತ, ಜೆಡಿಎಸ್‌ನ ಗುರಪ್ಪ ಕಲ್ಲಪ್ಪ ಹಿಟ್ಟಣಗಿ 3081 ಮತಗಳನ್ನು ಪಡೆದಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Arabhavi MLA and BJP leader Balachandra Jarkiholi clarified that he will not quit BJP. He denied the report that, he will join JD(S).

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ