ರಾಜಕೀಯಕ್ಕಿಂತಲೂ ಅಂಬೇಡ್ಕರ್ ವಿಚಾರಧಾರೆ ಮುಖ್ಯ : ಜಾರಕಿಹೊಳಿ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 06 : ನನಗೆ ರಾಜಕೀಯ ಅಧಿಕಾರ ಮುಖ್ಯವಲ್ಲ, ನನಗೆ ಅಂಬೇಡ್ಕರ್ ವಿಚಾರಧಾರೆಯೇ ಮುಖ್ಯ ಹೀಗೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅಂಬೇಡ್ಕರ್ ಪರಿನಿರ್ವಾಣ ದಿನ ಹಾಗೂ ಮೌಡ್ಯ ನಿವಾರಣ ಸಂಕಲ್ಪ ದಿನವನ್ನು ಬೆಳಗಾವಿಯ ಸ್ಮಶಾನದಲ್ಲಿ ಆಯೋಜನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಒಳ ಮೀಸಲಾತಿ: ಮುಖ್ಯಮಂತ್ರಿಯಿಂದ ಸದ್ಯದಲ್ಲೆ ದಲಿತ ಮುಖಂಡರ ಸಭೆ

ಕಳೆದ 20 ವರ್ಷದಿಂದ ಶಾಸಕನಾಗಿ ಕೆಲಸ ಮಾಡಿದಿನಿ, ನನಗೆ ಎಂಎಲ್‌ಎ ಟಿಕೆಟ್ ನೀಡದಿದ್ದರೂ ನಡೆಯುತ್ತೆ, ಎಐಸಿಸಿ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟರೂ ನಡೆಯುತ್ತದೆ ಆದರೆ ನಾನು ಮಾತ್ರ ಮೌಡ್ಯ ವಿರೋಧಿ ಸಂಕಲ್ಪ ಕಾರ್ಯಕ್ರಮ ಬಿಡುವುದಿಲ್ಲ ಎಂದರು.

I prefer Ambedkar ideology over politics : Satish Jarakiholi

ನನಗೆ ಯಾವುದೇ ರಾಜಕೀಯ ಆಕಾಂಕ್ಷೆ ಇಲ್ಲ ಕಾಂಗ್ರೆಸ್ ಹೈಕಮಾಂಡ್ ನಿನ್ನ ಆದ್ಯತೆ ಯಾವುದು ಅಂತ ಕೇಳಿದ್ರೆ. ನಾನು ಸ್ಮಶಾನ ಕಾರ್ಯಕ್ರಮ ಮೊದಲ ಆದ್ಯತೆ ಎಂದು ಹೇಳುತ್ತೇನೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸತೀಶ್ ಜಾರಕಿಹೊಳಿ ಗರಂ!

ಹೈಕಮಾಂಡ್ ಟಿಕೆಟ್ ಕೊಡಬೇಕು ಬಿಡಬೇಕು ಅವರಿಗೆ ಬಿಟ್ಟಿದ್ದು, ಆದರೆ ನಾನು ಬಲವಂತ ಮಾಡುವುದಿಲ್ಲ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಕಲ್ಯಾಣ ರಾಜ್ಯ ಕರ್ನಾಟಕದಲ್ಲಿ ನಿರ್ಮಿಸುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I will choose Ambedkar ideology over politics says Satish Jarakiholi in Ambedkar death anniversary and Anti superstition day program held in Belagavi cemetery on December 06th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ