ರಾಖಿ ಖರೀದಿಗೆ 10 ರೂ. ಕೊಟ್ಟಿಲ್ಲವೆಂದು ಬೆಳಗಾವಿ ಮಹಿಳೆ ಆತ್ಮಹತ್ಯೆ

Posted By:
Subscribe to Oneindia Kannada

ಬೆಳಗಾವಿ, ಆಗಸ್ಟ್ 8: ತನ್ನಣ್ಣನಿಗೆ ರಾಖಿ ಕಟ್ಟುವುದಕ್ಕೆ ಪತಿ 10 ರೂ. ಕೊಟ್ಟಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಮಲಪ್ರಭಾ ನಗರದ ಶಹಾಪುರ ಎಂಬಲ್ಲಿ ನಡೆದಿದೆ.

ಪತಿಯ ಅನೈತಿಕ ಸಂಬಂಧ, ಪತ್ನಿ ಆತ್ಮಹತ್ಯೆಗೆ ಶರಣು

ಆಗಸ್ಟ್ 7 ರಂದು ಭಾರತದಾದ್ಯಂತ ರಕ್ಷಾಬಂಧನವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರೆ, ಬೆಳಗಾವಿಯ ಶಹಾಪುರ ಮಾತ್ರ ಇಂಥದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಮಹಾದೇವಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರು ತಮ್ಮ ಅಣ್ಣನಿಗೆ ರಾಖಿ ಕಟ್ಟುವುದಕ್ಕೆಂದು ಪತಿ ಅಶೋಕ್ ಗೊಲ್ಲರ ಬಳಿ 10 ರೂ. ಕೊಡುವಂತೆ ಕೇಳಿದ್ದರು. ಆದರೆ ಕೇವಲ ಹತ್ತು ರೂ. ನೀಡುವುದಕ್ಕೂ ಒಪ್ಪದ ಪತಿಯ ವರ್ತನೆಗೆ ಬೇಸತ್ತು ಮಹಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Husband refuses to give 10 Rs. to buy rakhi: Belagavi woman commits suicide
World Record at Rakhi (Raksha Bandhan) Day, Bengaluru

ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ. ಸದ್ಯಕ್ಕೆ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A woman in Shahapur village near Malaprabha Nagar, Belagavi committed suicide for a silly reason that her husband had not given money to her to purchase Rakhi. The incident took place yesterday(Aug 7th) night.
Please Wait while comments are loading...