ಸಿಗರೇಟ್ ಬಿಟ್ಟ ಕಥೆಯನ್ನು ವಿವರಿಸಿದ ಸಿದ್ದರಾಮಯ್ಯ !

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 23 : 'ಜನರಲ್ಲಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿ ನಿರ್ಮೂಲನೆ ಮಾಡಬೇಕಿದೆ' ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಸಿಗರೇಟ್ ಬಿಟ್ಟ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಧೂಮಪಾನ ಹೆಚ್ಚಾದ್ರೆ ಸಂಶಯದ ಗುಣ ಹೆಚ್ಚಾಗುತ್ತಂತೆ!

ಬೆಳಗಾವಿ ನಗರದಲ್ಲಿ ಬುಧವಾರ ಸಂಜೆ ನಡೆದ ಪೊಲೀಸ್ ಇಲಾಖೆ ಬೀಟ್ ಸದಸ್ಯರ ಸಮಾವೇಶದಲ್ಲಿ ಸ್ವಾರಸ್ಯಕರವಾಗಿ ಮಾತಾಡಿದ ಸಿದ್ದರಾಮಯ್ಯ, ಮದ್ಯ ನಿಷೇಧ, ಸಿಗರೇಟ್ ಬಗ್ಗೆ ಮಾತನಾಡಿದರು.

How CM Siddaramaiah quits smoking

ಸಿದ್ದರಾಮಯ್ಯ ಹೇಳಿದ್ದೇನು?

* ನಾವು ಮದ್ಯಪಾನ ಇರಬೇಕು ಎಂದು ಹೇಳಿಲ್ಲ. ನಮ್ಮ ಸಮಾಜದಲ್ಲಿ ಕೆಲವು ಚಟಗಳಿವೆ.

ಅವುಗಳನ್ನ ಕಾನೂನು ಮೂಲಕ ನಿರ್ಭಂದಿಸಿದರೆ ತೊಡೆದು ಹಾಕಲು ಸಾಧ್ಯವಿಲ್ಲ.

ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...

* ನಾನು ಸಿಗರೇಟ್ ಸೇದುತ್ತಿದ್ದೆ. ಕಾಲೇಜು ದಿನಗಳಲ್ಲಿ ಒಂದ್ ಪ್ಯಾಕ್ ಸಿಗರೇಟ್ ಸೇದುತ್ತಿದ್ದೆ. ಯಾವಾಗ ಸಿಗರೇಟ್ ಸೇದಿದರೆ ಕ್ಯಾನ್ಸರ್ ಆದ್ರೆ ಏನು ಮಾಡೋದು ಅಂದುಕೊಂಡೆನೋ ಅಂದು ಬಿಟ್ಟುಬಿಟ್ಟೆ. 1987ರಿಂದ ಸಿಗರೇಟ್ ಸೇದುತ್ತಿಲ್ಲ.

* ಇಡೀ ರಾಷ್ಟ್ರದಲ್ಲಿ ಮದ್ಯಪಾನ ನಿಷೇಧ ಮಾಡಬೇಕು. ಕೇಂದ್ರ ಸರ್ಕಾರ ಮದ್ಯಪಾನ ನಿಷೇಧದ ನಿಯಮ ಮಾಡಿದರೆ ನಾನು ಸಂಪೂರ್ಣ ಬೆಂಬಲಿಸುತ್ತೇನೆ. ವಿದೇಶದಿಂದ ಮದ್ಯದ ಆಮದು ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು.

* ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗಿದೆ. ಆದರೆ, ಸಾರಾಯಿ ಕುಡಿಯುವುದು ನಿಂತಿದೇಯೇ?. ಮೊದಲು 30 ರೂ.ಗೆ ಎರಡು ಪ್ಯಾಕೇಜ್ ಕುಡಿದು ಚಟ ತೀರಿಸಿಕೊಳ್ಳುತ್ತಿದ್ದರು. ಈಗ ಎರಡು ಕ್ವಾಟರ್ ಕುಡಿಯಂತಾಗಿದೆ.

* ಹಳ್ಳಿಗಳಲ್ಲಿ ಸಾರಾಯಿ, ವಿಸ್ಕಿ ಮಾರಾಟ ಆಗದಂತೆ ಮಹಿಳೆಯರು ನೋಡಿಕೊಳ್ಳಬೇಕು. ಜನರಲ್ಲಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿ ನಿರ್ಮೂಲನೆ ಮಾಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah said that he gave up smoking soon after he realised that it is dangerous to health.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ