ಬಸ್‌ನಲ್ಲಿ ಬೆಳಗಾವಿಗೆ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್

Posted By:
Subscribe to Oneindia Kannada
   ಬಸ್‌ನಲ್ಲಿ ಬೆಳಗಾವಿಗೆ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್ | Oneindia Kannada

   ಬೆಳಗಾವಿ, ನವೆಂಬರ್ 20 : ಕೆಲ ಸಚಿವರಿಗೆ ಕಾರು ಬಿಟ್ಟು ಕಾಲು ನೆಲಕ್ಕೆ ಇಳಿಯುವುದಿಲ್ಲ, ಕೆಲವರಿಗೆ ದೂರ ಪ್ರಯಾಣಕ್ಕೆ ಹೆಲಿಕಾಪ್ಟರ್ರೇ ಆಗಬೇಕು ಆದರೆ ಆರೋಗ್ಯ ಸಚಿವ ರಮೇಶ್ ಕುಮಾರ್ ಉಳಿದ ಸಚಿವರಿಗೆ ಕೊಂಚ ಭಿನ್ನ ಅವರು ಐಶಾರಾಮಿತ್ವಕ್ಕೆ ಮಹತ್ವ ಕೊಡುವುದಿಲ್ಲ ಅದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.

   ರಮೇಶ್ ಕುಮಾರ್ ರನ್ನು ಕಾಂಗ್ರೆಸ್ ಸರಕಾರ ಕೂಗು ಮಾರಿ ಮಾಡದಿರಲಿ

   ಸೋಮವಾರ (ನವೆಂಬರ್ 20) ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಲು ಸಚಿವ ರಮೇಶ್ ಕುಮಾರ್ ಬಂದಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ. ಬೆಳಗಾವಿಗೆ ಬರಲು ರಾತ್ರಿ ರೈಲು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ರೈಲು ಮಿಸ್ ಆದ ಪರಿಣಾಮ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದಾರೆ ಸಚಿವರು.

   Health minister arrived in Bus to participate in session

   ಬಸ್ ಅನುಭವ ಅದ್ಬುತವಾಗಿತ್ತು ಎಂದಿರುವ ರಮೇಶ್ ಕುಮಾರ್ ಕೆ.ಎಸ್.ಆರ್.ಟಿ.ಸಿ ಕಾರ್ಮಿಕರನ್ನು ಮನಸಾರೆ ಹೊಗಳಿದ್ದಾರೆ.

   ಸಚಿವ ಸ್ಥಾನ ತೊರೆಯುವ ಬೆದರಿಕೆ ಹಾಕಿದ ರಮೇಶ್ ಕುಮಾರ್?

   'ಕಾರ್ಮಿಕರು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ, ಬಸ್ ಅನ್ನು ಸ್ವಚ್ಚವಾಗಿ ಇಟ್ಟುಕೊಂಡಿದ್ದಾರೆ. ಜಾಗೃತೆಯಿಂದ ಬಸ್ ಓಡಿಸುತ್ತಾರೆ, ನಮ್ಮಂತಹ ವಯಸ್ಸಾದಾವರಿಗೆ ಅಲ್ಲಲ್ಲಿ ಬಸ್ ನಿಲ್ಲಿಸಿ ಸಹಕರಿಸುತ್ತಾರೆ' ಎಂದು ಕಾರ್ಮಿಕರ ಶ್ರಮವನ್ನು ಹಾಡಿ ಹೊಗಳಿದರು.

   ಇದು ಸಾರ್ವಜನಿಕ ಉದ್ಯಮ ಕಾರ್ಮಿಕರ ಇದನ್ನ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆ.ಎಸ್.ಆರ.ಟಿ.ಸಿ ಕಾರ್ಮಿಕರ ವೃತ್ತಿಪರತೆ ಧನ್ಯವಾದ ತಿಳಿಸಿದರು.

   ವಿಧೇಯಕ ಮಂಡನೆ
   ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ವಿಧೇಯಕ ಇವತ್ತು (ನವೆಂಬರ್ 20) ಅಥವಾ ನಾಳೆ ಸದನದಲ್ಲಿ ಮಂಡಸುತ್ತೇನೆ. ಇವತ್ತು ಸದನದಲ್ಲಿ ಪ್ರಶ್ನೋತ್ತರಗಳಿಗೆ ಉತ್ತರ ನೀಡಬೇಕಿದೆ ಎಂದು ಸಚಿವ ರಮೇಶಕುಮಾರ್ ಇದೇ ಸಮಯದಲ್ಲಿ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka state health minister RameshKumar arrived in KSRTC bus to Belagavi to Participate in winter session on monday Navember 20.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ