ಬೆಳಗಾವಿಯಲ್ಲಿ ಬಂದೂಕು ಪ್ರದರ್ಶನ: ಕರವೇ ಆಕ್ರೋಶ

Posted By: Ananthanag
Subscribe to Oneindia Kannada

ಬೆಳಗಾವಿ, ನವೆಂಬರ್2: ಕನ್ನಡರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳದಿನವನ್ನು ಆಚರಿಸಿದ್ದು, ಕಲ್ಲು ತೂರಾಟ ನಡೆಸಲಾಗಿತ್ತು. ಕರ್ನಾಟಕ ವಿರುದ್ದ ಮತ್ತು ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಬೇಕೆಂದು ಘೋಷಣೆ ಕೂಗಿದ್ದು, ಅಲ್ಲದೆ ಬಂದೂಕು ಪ್ರದರ್ಶನವನ್ನು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಎಂಇಎಸ್ ನ ರತ್ನ ಪ್ರಸಾದ್ ಪವಾರ್ ಅವರ ವಿರುದ್ಧ ಬೆಳಗಾವಿ ಶಹಪುರ ಮಾರ್ಕೇಟ್ ನಲ್ಲಿ 2 ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ.

ಬಂದೂಕನ್ನು ಮುಟ್ಟುಗೋಳು ಹಾಕಿಕೊಂಡಿರುವ ಅವರು ಗನ್ ಅಸಲಿಯೋ ನಕಲಿಯೋ ಶೀಘ್ರವಾಗಿ ತಿಳಿಯಲಿದೆ. ಅಲ್ಲದೆ ಪ್ರಸಾದ್‍ರನ್ನು ಬಂಧಿಸಿದ್ದು ವಿಚಾರಣೆ ನಂತರ ಎಲ್ಲ ವಿಚಾರಗಳೂ ಹೀರುಗೊಳಿಸುವುದಾಗಿ ಆಯುಕ್ತ ತಿಳಿಸಿದ್ದಾರೆ.

gun show by MES member in belagavi blck day rally

ಈ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಬಂದೂಕು ಪ್ರದರ್ಶಿಸಿದವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕರಾಳದಿನ ಹಿನ್ನೆಲೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಅಲ್ಲದೆ ಬೆಂಗಳೂರಿನ ಟೌನ್ ಹಾಲಿನಿಂದ ಪ್ರೀಡಂ ಪಾರ್ಕ್ ರ್ಯಾಲಿ ನಡೆಸಿ ಎಂಇಎಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.

ಈ ಘಟನೆಗೆ ಹಲವು ಮುಖಂಡರು ಅಸಮಾಧಾನ ವ್ಯಕ್ತ ಪಡಿಸಿದ್ದು, ಕ್ರಮ ಜರುಗಿಸಬೇಕೆಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Belagavi Tuesday participating in the ‘black day’ rally and show the gun. arested Ratna Prasd Pavar and Documented 2 cases
Please Wait while comments are loading...