ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಗುಂಪು ಘರ್ಷಣೆ, 12 ಜನರಿಗೆ ಗಾಯ

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 29 : ಬೆಳಗಾವಿ ನಗರದ ಖಡಕ್‌ ಗಲ್ಲಿ ಮತ್ತು ಕಚೇರಿ ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಎರಡು ಗಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಸೇರಿ 12 ಜನರು ಗಾಯಗೊಂಡಿದ್ದಾರೆ. ಸದ್ಯ, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಸೋಮವಾರ ಮಧ್ಯರಾತ್ರಿ 11.30ರ ಸುಮಾರಿಗೆ ಖಡಕ್ ಗಲ್ಲಿ ಮತ್ತು ಕಚೇರಿ ರಸ್ತೆಯಲ್ಲಿ ಎರಡು ಗಂಪುಗಳ ನಡುವೆ ಕಲ್ಲು ತೂರಾಟ ಆರಂಭವಾಯಿತು. ಕಚೇರಿ ರಸ್ತೆಯಲ್ಲಿ ದುಷ್ಕರ್ಮಿಗಳು ಆಟೋವೊಂದಕ್ಕೆ ಬೆಂಕಿ ಹಚ್ಚಿದ್ದು, ಘರ್ಷಣೆ ಹೆಚ್ಚಾಗಲು ಕಾರಣವಾಯಿತು.

belagavi

ಮೊದಲು ಖಡಕ್ ಗಲ್ಲಿಯಲ್ಲಿನ ಛಾಯಾ ದರ್ಶಿನಿ ಹೋಟೆಲ್ ಮತ್ತು ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಂತರ ಈ ಘರ್ಷಣೆ ಕಚೇರಿ ರಸ್ತೆಗೂ ಹಬ್ಬಿ ಅಲ್ಲಿಯೂ ಕಲ್ಲು ತೂರಾಟ ನಡೆಯಿತು. [ಚಿತ್ರ ಕೃಪೆ : ಆಮ್ ಎಬೌಟ್ ಬೆಳಗಾಂ]

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಮನೆಗಳ ಮೇಲೆ ಕಲ್ಲು ತೂರಾಟ ನಡೆಯಿತು, ಮಾರುತಿ ಕಾರನ್ನು ಜಖಂಗೊಳಿಸಲಾಯಿತು. ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡರು. [ಬೆಳಗಾವಿ : 334 ಕೋಟಿ ಹೂಡಿಕೆ ಮಾಡಲಿದೆ ಏಕಸ್ ಏರೋಸ್ಪೇಸ್]

ಈ ಗುಂಪು ಘರ್ಷಣೆಯಲ್ಲಿ 12 ಜನಗರಿಗೆ ಗಾಯಗಳಾಗಿವೆ. ಖಡಕ್ ಗಲ್ಲಿ, ಕಚೇರಿ ರಸ್ತೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉತ್ತರ ವಲಯ ಐಜಿಪಿ ಉಮೇಶ್‌ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

English summary
There was terrific stone pelting in Khadak Galli and Kacheri road of Belagavi city at around 11.30 pm on Monday night. The miscreants burnt a auto on Kacheri road. Situation is now under control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X