ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ಜಗಳದಲ್ಲಿ ಖನಗಾಂವ್ ಗ್ರಾ.ಪಂ. ಅಧ್ಯಕ್ಷೆ 'ರಾಡ್ ರೌಡಿಸಂ'

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಆಸ್ತಿ ಜಗಳದಲ್ಲಿ ಖನಗಾಂವ್ ಗ್ರಾ.ಪಂ. ಅಧ್ಯಕ್ಷೆ 'ರಾಡ್ ರೌಡಿಸಂ' | Oneindia Kannada

ಗೋಕಾಕ್ (ಬೆಳಗಾವಿ ಜಿಲ್ಲೆ), ಜೂನ್ 25: ಜಮೀನು ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯು ತನ್ನ ಮೈದುನನ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆಯು ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ನಡೆದಿದೆ. ಖನಗಾಂವ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಬೆನಕನ್ನವರ ಹಲ್ಲೆ ನಡೆಸಿದವರು.

ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ನಿರ್ಮಲಾ ಅವರು ತಮ್ಮ ಮೈದುನನ ಪತ್ನಿ ಸುಮಿತ್ರಾ ಬೆನಕನ್ನವರ್ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಸುಮಿತ್ರಾ ಅವರ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಸದ್ಯಕ್ಕೆ ಗೋಕಾಕ್ ನ ಸರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

GP president assault on relative woman in Gokak

ಆಸ್ತಿ ವಿಚಾರವಾಗಿ ದಾಯಾದಿಗಳ ಮಧ್ಯೆ ಆರಂಭವಾದ ಕಲಹ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಖನಗಾಂವ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ನಿರ್ಮಲಾ ಅವರು ತಮ್ಮ ಮೈದುನನ ಪತ್ನಿ ಸುಮಿತ್ರಾ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಇದೀಗ ನಿರ್ಮಲಾ ಮತ್ತು ಆಕೆಯ ಪತಿ ಬಸವರಾಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Nirmala Benakannavara, president of Khanagaon GP, Gokak taluk, Belagavi district assaulted on relative woman with rod on property dispute. Complain registered in Gokak rural police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X