ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡಿ : ಸಿದ್ದರಾಮಯ್ಯ

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 23 : 'ನಮ್ಮ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗಿಲ್ಲ. ಏಕೀಕರಣ ಆದ ಮೇಲೆ ನಾವೆಲ್ಲ ಒಂದೇ. ಒಂದು ನಾಡು, ಒಂದು ಭಾಷೆ, ಒಂದು ಆಡಳಿತ ಎಂಬ ಗುರಿ ನಮ್ಮದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು.

ಗುರುವಾರ ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಯೋಜನೆಗಳ ವಿವರಗಳನ್ನು ನೀಡಿದರು.

ಕನ್ನಡ ಹಬ್ಬದ ದಿನ ಕಲಬುರಗಿಯಲ್ಲಿ ಪ್ರತ್ಯೇಕತೆಯ ಕೂಗು

Govt committed to north Karnataka development says Siddaramaiah

'ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡಿ' ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ (ಬಿಜೆಪಿ) ಹಾಗೂ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಹೇಳಿದರು.

'ಬೆಳಗಾವಿಗೆ ಅಧಿವೇಶನದ ಹೆಸರಿನಲ್ಲಿ ಮಜಾ ಮಾಡಲು ಬರುವುದೇ?'

ಸಿದ್ದರಾಮಯ್ಯ ನೀಡಿದ ಉತ್ತರ ಇಲ್ಲಿದೆ...

* ಇದು ಬೆಳಗಾವಿಯಲ್ಲಿ ಈ ಸರ್ಕಾರದ ಕೊನೆಯ ಅಧಿವೇಶನ. ಇನ್ನೊಂದು ಅಧಿವೇಶನ ಬೆಂಗಳೂರಲ್ಲಿ ನಡೆಯುತ್ತದೆ. ಬೆಳಗಾವಿಯಲ್ಲಿ ಈ ಬಾರಿ ಪ್ರತಿಭಟನೆಯ ಕಾವಿಲ್ಲ. ಅಂದರೆ ಜನ ನಮ್ಮ ಸರ್ಕಾರದ ಬಗ್ಗೆ ಸಮಾಧಾನದಿಂದಿದ್ದಾರೆ ಎಂದರ್ಥ. ವೈದ್ಯರ ಪ್ರತಿಭಟನೆ ನಡೆದದ್ದು ತಪ್ಪು ಗ್ರಹಿಕೆಯಿಂದ.

* ಸರ್ಕಾರ 5 ವರ್ಷ ಪೂರೈಸಿದಾಗ ಸಾಮಾನ್ಯವಾಗಿ ವಿರೋಧಿ ಅಲೆ ಇರುತ್ತದೆ. ಆದರೆ, ನಮ್ಮ ಸರ್ಕಾರದಲ್ಲಿ ವಿರೋಧಿ ಅಲೆ ಕಾಣುತ್ತಿಲ್ಲ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ.

* 2017-18ನೇ ಸಾಲಿನಲ್ಲಿ 3000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ರೂ.1438 ಕೋಟಿ ಬಿಡುಗಡೆ ಮಾಡಲಾಗಿದೆ. 733 ಕೋಟಿ ವೆಚ್ಚ ಮಾಡಲಾಗಿದೆ. ಈ ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣ ಅನುದಾನವನ್ನು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

* ನಮ್ಮ ಸರ್ಕಾರ ಇಲ್ಲಿಯ ತನಕ ರಾಜ್ಯದಲ್ಲಿ 234 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 2271.86 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಿದೆ. ಅದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 163 ಯೋಜನೆಗಳನ್ನು 1,466.93 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ.

* ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಈ ತನಕ ರಾಜ್ಯದಲ್ಲಿ ಒಟ್ಟು 4,501.47 ಕೋಟಿ ವೆಚ್ಚದಲ್ಲಿ 9,545 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 2,101.26 ಕೋಟಿ ವೆಚ್ಚ ಮಾಡಿ 4,576.45 ಕಿ.ಮೀ.ರಸ್ತೆ ಅಭಿವೃದ್ಧಿ ಪಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the last day of the Belagavi winter session Karnataka Chief Minister Siddaramaiah said, Government committed to north Karnataka development. Here are the key points of the Siddaramaiah speech.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ