ಅಧಿವೇಶನದಲ್ಲಿ ಪರಮೇಶ್ವರ್- ಈಶ್ವರಪ್ಪ ನಡುವೆ ವಾಕ್ಸಮರ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್.21: ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಚಳಿಗಾಲದ ಅಧಿವೇಶನ ರೈತರ ಬಂಧನ ಸಂಬಂಧ ನಡೆದ ವಾದ, ಪ್ರತಿವಾದದಲ್ಲಿಯೇ ಕೆಲವು ಸಮಯ ಕಳೆದು ಹೋಯಿತು. ನಿಲುವಳಿ ಪ್ರಸ್ತಾವನೆ ವೇಳೆ ಸಭಾಪತಿಯ ಮುಂದೆ ಬಿಜೆಪಿ ಮುಖಂಡ ಈಶ್ವರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ನಡುವೆ ವಾಗ್ವಾದ ನಡೆಯಿತು.

ರಾಜ್ಯದಲ್ಲಿ ತೋರಿರುವ ಭೀಕರ ಬರಗಾಲದ ಕುರಿತು ಸೋಮವಾರ ಚರ್ಚೆ ಪ್ರಾರಂಭವಾಯಿತು. ಇದಕ್ಕೆ ಸಂಬಂಧ ಪಟ್ಟಂತೆ ನಿಲುವಳಿ ಸೂಚನೆ ಮಂಡನೆ ಪ್ರಸ್ತಾವನೆಗೆ ವಿಪಕ್ಷ ನಾಯಕ ಈಶ್ವರಪ್ಪ ಮುಂದಾಗಿ ಸಭಾಪತಿಗಳಾದ ಶಂಕರಮೂರ್ತಿಗಳ ಅನುಮತಿ ಪಡೆದರು. ರೈತರಿಗೆ ಸರಿಯಾದ ಪರಿಹಾರ ನೀಡುತ್ತಿಲ್ಲ. ಪರಿಹಾರಕ್ಕೆ ಕೇಂದ್ರದಿಂದ ಹಣ ಬಂದಿದ್ದರೂ ಇನ್ನೂ ಕೆಲಸ ನಡೆದೇ ಇಲ್ಲ ಎಂದರು.[ರೈತರೇನು ಗೂಂಡಾಗಳೇ, ದೇಶದ್ರೋಹಿಗಳೇ?]

G, Parameshwar and Eshwarappa altercation in assembly

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿ ಇನ್ನು ಪರಿಹಾರ ಹಣ ಬಂದೇ ಇಲ್ಲ, ಈಗ ತಾನೇ ಅಧ್ಯಯನ ತಂಡ ಬರವೀಕ್ಷಣೆ ಮಾಡಿಕೊಂಡು ಹೋಗಿದೆ ಎಂದು ಕೆಲಮುಖಂಡರು ಮಾತನಾಡಿದರು.

ನಂತರ ಪಸ್ತಾವನೆಗೆ ತಡೆಯೊಡ್ಡಿ ಅಜೆಂಡಾ ಪ್ರಕಾರ ಆಶೋತ್ತರ ಕಲಾಪ ಕೈಗೆತ್ತಿಕೊಳ್ಳಬೇಕು ಎಂದು ನಿಯಮಾವಳಿ ಬಗ್ಗೆ ಸಭೆಗೆ ಸೂಚಿಸುತ್ತಾ ಈಶ್ವರಪ್ಪನವರ ಮಾತನ್ನು ತಡೆಹಿಡಿದರು.

G, Parameshwar and Eshwarappa altercation in assembly

ನನಗೆ 10 ಹತ್ತು ನಿಮಿಷ ಸಮಯ ನೀಡಿ ನಂತರ ಆಶೋತ್ತರ ಕಲಾಪಕ್ಕೆ ಕೈಗೆತ್ತಿಕೊಳ್ಳುವಿರಂತೆ ಎಂದು ಈಶ್ವರಪ್ಪ ಹೇಳಿದರು. ಆದರೆ ಪರಮೇಶ್ವರ್ ಅವರು ಸಭಾಪತಿಗಳಿಗೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಪಸ್ತಾವನೆಯನ್ನು ಮೊದಲೇ ಮಾಡಬಾರದು ಎಂದು ಮಾತನಾಡುತ್ತಿದ್ದಂತೆ ಸಭಾಪತಿಗಳು ಸಮಾಧಾನ ಮಾಡಲು ಯತ್ನಿಸಿದರೂ ಈಶ್ವರಪ್ಪ ಮತ್ತು ಪರಮೇಶ್ವರ ನಡುವೆ ಪರಸ್ಪರ ವಾಗ್ವಾದ ನಡೆಯಿತು.

ನಂತರ ಸಭೆಯನ್ನು ಕೆಲ ಕಾಲ ಮುಂದಕ್ಕೆ ಹಾಕಲಾಯತು. ಚರ್ಚೆಯು ಬರೀ ವಾಕ್ಸಮರಕ್ಕೆ ಮಿತಿಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
10 days Karnataka Assembly winter session in Belagavi. Day one Monday KPCC President G.Parameshwar and The BJP leader Eshwarappa one and the altercation in assembly in suvarna vidhana soudha.
Please Wait while comments are loading...