ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣಾ ನದಿಗೆ ಹೆಚ್ಚಿನ ನೀರು : ಹಲವು ಗ್ರಾಮಗಳ ಸಂಪರ್ಕ ಕಡಿತ

|
Google Oneindia Kannada News

Recommended Video

Krishna river released excess of rain water several villages lost connectivity | Oneindia Kannada

ಬೆಳಗಾವಿ, ಸೆಪ್ಟೆಂಬರ್ 22 : ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕೃಷ್ಣಾ ಹಾಗೂ ಅದರ ಉಪನದಿ ದೂಧ್‌ಗಂಗಾ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. ಚಿಕ್ಕೋಡಿ ತಾಲೂಕಿನ ಎರಡು ಸೇತುವೆಗಳು ಜಲಾವೃತಗೊಂಡಿವೆ.

ಕಲ್ಲೋಳ-ಯಡೂರ, ಕಾರಗದಾ-ಭೋಜ, ಭೋಜವಾಡಿ-ಕುನ್ನೂರ ಸೇತುವೆಗಳು ಜಲಾವೃತಗೊಂಡಿವೆ. ರಾಜಾಪುರ ಬ್ಯಾರೇಜ್ ಮೂಲಕ 79,470ಕ್ಯುಸೆಕ್, ದೂಧ್ ಗಂಗಾ ನದಿ ಮೂಲಕ 19,536 ಕ್ಯುಸೆಕ್ ಸೇರಿ ಕೃಷ್ಣಾ ನದಿ ಮೂಲಕ ಕರ್ನಾಟಕಕ್ಕೆ 99 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ.

ಕರ್ನಾಟಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡಿಕರ್ನಾಟಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡಿ

Excess water is released in Krishna river, Several villages lost connectivity

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಗುರುವಾರ 2.40 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಲಿಂಗಸುಗೂರಿನ ಶೀಲಹಳ್ಳಿಯ ಕೃಷ್ಣಾ ನದಿ ಸೇತುವೆ ಜಲಾವೃತಗೊಂಡಿದೆ. ನಡುಗಡ್ಡೆ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ

ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಮ್ಯಾದರಗಡ್ಡಿ, ಓಂಕಾರದೊಡ್ಡಿ, ಕರಕಲಗಡ್ಡಿ ನಡುಗಡ್ಡೆ ಗ್ರಾಮಸ್ಥರು ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಬೋಟ್ ಮೂಲಕ ಗ್ರಾಮದ ಜನರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಆದರೆ, ಗ್ರಾಮಸ್ಥರು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಮುಂಬೈನಲ್ಲಿ ಮತ್ತೆ ಮಹಾ ಮಳೆ, ಬುಧವಾರ ಶಾಲೆ-ಕಾಲೇಜು ರಜಾಮುಂಬೈನಲ್ಲಿ ಮತ್ತೆ ಮಹಾ ಮಳೆ, ಬುಧವಾರ ಶಾಲೆ-ಕಾಲೇಜು ರಜಾ

ಉತ್ತಮವಾದ ಮುಂಗಾರು ಮಳೆಯಿಂದಾಗಿ ದಕ್ಷಿಣ ಭಾರತದ ಅನೇಕ ಜಲಾಶಯಗಳು ಭರ್ತಿಯಾಗಿವೆ. ಮಹಾರಾಷ್ಟ್ರದ ಕೋಯ್ನಾ, ವಾರಣಾ, ರಾಧಾನಗರಿ, ಧೂಮ, ದೂಧ್‌ಗಂಗಾ ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕದಲ್ಲಿ ಆಲಮಟ್ಟಿ, ಕಬಿನಿ ಜಲಾಶಯಗಳು ಭರ್ತಿಯಾಗಿವೆ, ಉಳಿದ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.

English summary
More than 5 villages in Lingasugur, Raichur district lost road connectivity after excess rain water was released from Maharashtra into the Krishna river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X