ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡೆದು ಹೋದ ಬೆಳಗಾವಿಯ ತಿಲೋಲಿ ಸೇತುವೆ: ಹಳ್ಳಿಗಳ ಸಂಪರ್ಕ ಕಡಿತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ.16: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಖಾನಾಪೂರ ತಾಲೂಕಿನ ತಿಲೋಲಿ ಸೇತುವೆ ಒಡೆದು ಹೋಗಿದೆ. ಇದರಿಂದ ಖಪಾತ ಸೇರಿ ಅನೇಕ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಇದೀಗ ಸೇತುವೆ ಒಡೆದು ಹೋಗಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಸದ್ಯ ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 5 ವರ್ಷಗಳಲ್ಲಿ ಈ ಸೇತುವೆಯನ್ನು ಎರಡು ಬಾರಿ ದುರುಸ್ಥಿಗೊಳಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಗಳಿಂದಾಗಿ ಈ ಸೇತುವೆ ಮತ್ತೆ ಒಡೆದಿದೆ.

ಕಾಫಿನಾಡಲ್ಲಿ ಮಳೆ ಹಾವಳಿ: 30 ವರ್ಷಗಳ ನಂತರ ಮುಳುಗಿದ ಹೆಬ್ಬಾಳೆ ಸೇತುವೆ!ಕಾಫಿನಾಡಲ್ಲಿ ಮಳೆ ಹಾವಳಿ: 30 ವರ್ಷಗಳ ನಂತರ ಮುಳುಗಿದ ಹೆಬ್ಬಾಳೆ ಸೇತುವೆ!

ಹೀಗಾಗಿ ಆ ಪ್ರದೇಶವು ನಡುಗಡ್ಡೆಯಂತಾಗಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗಮನಿಸಿದರೆ ಕನಿಷ್ಟ 15 ದಿನಗಳವರೆಗೆ ಪ್ರವಾಹ ತಗ್ಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

Effect of rainfall Tiloli Bridge collapse in Khanapur

ಇದು ಖಾನಾಪೂರ ತಾಲೂಕಿನ ಪರಿಸ್ಥಿಯಾದರೆ, ಗಾಳಿ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಇಂದು ಸೋಮವಾರ ಮರಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದೆ.

ನಂತರ ಜೆಸಿಬಿ ಮೂಲಕ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದಾರೆ. ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಮರಗಳು ಧರೆಗುರುಳಿವೆ.

English summary
Effect of rainfall Tiloli Bridge collapse in Khanapur Taluk in Belagavi district. Many villages have been disconnected from this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X