ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರಸ್ನೇಹಿ ಕಟ್ಟಡಕ್ಕೆ ಬೆಳಗಾವಿ ಪಾಲಿಕೆಯಿಂದ ಶೇ 10 ಆಸ್ತಿ ತೆರಿಗೆ ರಿಯಾಯ್ತಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 8: ಬೆಳಗಾವಿ ನಗರದಲ್ಲಿ ಪರಿಸರ ಸ್ನೇಹಿಯಾಗಿ ಕಟ್ಟಡ ನಿರ್ಮಾಣ ಮಾಡಿದ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ಶೇ 10ರಷ್ಟು ವಿನಾಯಿತಿ ನೀಡುವುದಾಗಿ ಬೆಳಗಾವಿ ನಗರಪಾಲಿಕೆ ಘೋಷಿಸಿದೆ. ಕಟ್ಟಡ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗಬಾರದು ಎಂದು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರತನ್ ಮಸೇಕರ್ ತಿಳಿಸಿದ್ದಾರೆ.

ಇದೇ ರೀತಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕೂಡ ಆಸ್ತಿ ತೆರಿಗೆಯಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಇನ್ನು ಬೆಳಗಾವಿ ನಗರದಲ್ಲಿ ನಿರ್ಮಿಸುವ 4 ಸಾವಿರ ಚದರಡಿ ಮೇಲ್ಪಟ್ಟ ಕಟ್ಟಡಕ್ಕೆ ಅನುಮೋದನೆಯಾದ ನಕ್ಷೆ ಕಡ್ಡಾಯ ಎಂದು ಕೂಡ ನಿರ್ಧರಿಸಲಾಗಿದೆ.[ಬೆಳಗಾವಿ ಜಾನುವಾರು ಆಸ್ಪತ್ರೆ ನಿರ್ಮಾಣ ಯಾವಾಗ?]

Property tax

ನಗರ ವ್ಯಾಪ್ತಿಯಲ್ಲಿರುವ ಆಸ್ತಿಗಳ ಮರುಸರ್ವೇಗೆ ಪಾಲಿಕೆ ನಿರ್ಧರಿಸಿದ್ದು, ಜತೆಗೆ ಶೇ 15ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಕೂಡ ತೀರ್ಮಾನ ಕೈಗೊಂಡಿದ್ದು, ಆಸ್ತಿ ತೆರಿಗೆ ಸಂಗ್ರಹದ ಮೊತ್ತವನ್ನು 35 ಕೋಟಿ ರುಪಾಯಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. 2017-18ನೇ ಸಾಲಿನಿಂದ ಆಸ್ತಿ ತೆರಿಗೆಯ ಚಲನ್ ಗಳನ್ನು ಗಣಕೀಕೃತ ಮತ್ತು ಡಿಜಿಟಲೈಸ್ ಮಾಡಿ, ವಿತರಿಸಲಾಗುತ್ತದೆ.[ಹಿಂಡಲಗಾ ಜೈಲಿನಿಂದ ಎಸ್ಕೇಪ್ ಪ್ಲಾನ್: ಬೆಳಗಾವಿ ಪೊಲೀಸರಿಂದ ತಪಾಸಣೆ]

ಮಾಳಮಾರುತಿ ಬಡಾವಣೆಯಲ್ಲಿ ನಿವೇಶನಗಳನ್ನು ಮಾರುವ ಮೂಲಕ ಮೂವತ್ತು ಕೋಟಿ ಆದಾಯ ನಗರ ಪಾಲಿಕೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ನಗರ ಪಾಲಿಕೆಯ ಬಜೆಟ್ ಸಭೆಯಲ್ಲಿ ಆದಾಯ-ವೆಚ್ಚದ ಬಗ್ಗೆ ಮಸೇಕರ್ ಮಂಗಳವಾರ ಮಾಹಿತಿ ನೀಡಿದರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಪ್ರಕಟವಾಗಿದೆ.

English summary
Belagavi City Corporation has announced 10% rebate in property tax on environment-friendly constructions in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X