ಬೆಳಗಾವಿ : ಖಾಸಗಿ ವೈದ್ಯರ ಮುಷ್ಕರ, ಸಿಎಂ ಮಧ್ಯಸ್ಥಿಕೆಗೆ ಮನವಿ

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 13 : ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕೆಎಂಪಿಎ ಕಾಯ್ದೆ ತಿದ್ದು ಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಆಸ್ಪತ್ರೆಗಳ ವೈದ್ಯರ ಕೊರತೆ ಎದುರಾಗಿದೆ..

ಕೆಎಂಪಿಎ ಕಾಯ್ದೆ ತಿದ್ದುಪಡಿಗೆ ವಿರೋಧ, ವೈದ್ಯರಿಂದ ಬೆಳಗಾವಿ ಚಲೋ

ಬೆಳಗಾವಿ ಚಲೋ ಎಂಬ ಘೋಷಣೆಯಡಿಯಲ್ಲಿ ನೂರಾರು ವೈದ್ಯರು ಬೆಳಗಾವಿಗೆ ಆಗಮಿಸಿದ್ದು, ತಾರಿಹಾಳದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Doctors seeks CM intervention in KMPA at issue

ಮಾಧ್ಯಮಗಳ ಜೊತೆ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಎಚ್.ಎನ್.ರವೀಂದ್ರ ಅವರು, 'ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಸಮಿತಿಯ ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇಂದಿನಿಂದ ಬೆಳಗಾವಿ ಅಧಿವೇಶನ, 7 ಪ್ರತಿಭಟನೆ

'ಕರ್ನಾಟಕ ಸರ್ಕಾರ ವೈದ್ಯರನ್ನು ಬೀದಿಗೆ ತಂದು ನಿಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಆಗ್ರಹಿಸಿದರು.

ಸುವರ್ಣವಿಧಾನಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, 'ವೈದ್ಯರು ಪ್ರತಿಭಟನೆ ನಡೆಸಲಿ ಸಂತೋಷ. ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಸಾಮಾನ್ಯ. ಕೆಎಂಪಿಎ ಕಾಯ್ದೆ ತಿದ್ದುಪಡಿ ಕುರಿತು ಸದಸ ಸಮಿತಿ ವರದಿ ಬಂದಿದೆ. ಈ ಬಗ್ಗೆ ಸದನ ತೀರ್ಮಾನ ಮಾಡಲಿದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Private hospital doctors protesting in Belagavi and demand for Chief Minister Siddaramaiah intervention in to solve the issue of Karnataka government not to table Karnataka Private Medical Establishments (KPME) Act .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ