1.25ಲಕ್ಷ ಸಂಬಳಕ್ಕೂ ವಿಶೇಷ ವೈದ್ಯರು ಸೇವೆಗೆ ಸಿಗುತ್ತಿಲ್ಲ

Posted By:
Subscribe to Oneindia Kannada

ಬೆಳಗಾವಿ. ನವೆಂಬರ್ 22: ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದವರಿಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಜಿಲ್ಲಾ ಕೇಂದ್ರಗಳಲ್ಲಿ 1.25 ಲಕ್ಷದಷ್ಟು ಸಂಬಳವನ್ನು ನೀಡಿದರೂ ವಿಶೇಷ ವೈದ್ಯರು ಕೆಲಸಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು.

ನಾವು ಒಬ್ಬ ವಿಶೇಷ ವೈದ್ಯರಿಗೆ ಒಂದು ತಿಂಗಳಿಗೆ ಒಂದು ಲಕ್ಷ ಮತ್ತು ಹೈದ್ರಾಬಾದ್ ಕರ್ನಾಟಕದ ವಿಶೇಷ ವೈದ್ಯರಾದರೆ ಅವರಿಗೆ ಹೆಚ್ಚುವರಿಯಾಗಿ 25ಸಾವಿರ ನೀಡಲು ಅಫರ್ ಮಾಡಿದರೂ ಅವರು ಸೇವೆಗೆ ಬರುತ್ತಿಲ್ಲ ಏನು ಮಾಡಬೇಕು ಎಂದು ಮರು ಪ್ರಶ್ನೆ ಹಾಕಿದರು.[ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳೇ ಹೆಚ್ಚು]

doctors refuse to work at taluk-level hospitals

ಮಾಹಿತಿಯ ಪ್ರಕಾರ ಎಂಬಿಬಿಎಸ್ ಮಾಡಿದ ಡಾಕ್ಟರ್ ಗಳು ಮತ್ತು ಮುಂದುವರೆದು ವಿಶೇಷ ಪರಿಣತಿಗಾಗಿ ಡಿಪ್ಲೊಮಾ ಮಾಡಿದ ವೈದ್ಯರನ್ನು ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ನೂರಕ್ಕೆ 53 ಜನರನ್ನು ಜಿಲ್ಲಾ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ. ಅದರಲ್ಲಿ ಬಹಳಷ್ಟು ಮಂದಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

146 ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಎರಡು ಡಯಾಲಿಸೀಸ್ ಸೆಂಟರ್ ಗಳನ್ನು ಜ.1.2017 ರಿಂದ ತೆರೆಯಲಾಗುತ್ತಿದೆ. 35 ತಾಲ್ಲೂಕುಗಳಲ್ಲಿ ಈಗಾಲೇ ಡಯಾಲಿಸೀಸ್ ಕೇಂದ್ರಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ರು 150 ಮಾತ್ರ ಡಯಾಲಿಸೀಸ್ ಗೆ ಚಾರ್ಜ್ ಮಾಡಲಾಗುತ್ತಿದೆ ಎಂದರು.
ಇನ್ನು ಡಯಾಲಿಸೀಸ್ ಕೇಂದ್ರಗಳ ನಿರ್ವಹಣೆಗೆ ವೈದ್ಯರು ಮತ್ತು ಸಿಬ್ಬಂದಿಯ ಆಯೋಜನೆಗೆ ಖಾಸಗಿ ಆಸ್ಪತ್ರೆಗಳಂತೆ ಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡುವುದು ಒಳ್ಳೆಯದು ಎಂದು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka state health minister KR Ramesh on Monday, while replying to the opposition’s questions in the legislative council, admitted that specialized doctors, despite being offered Rs 1.25 lakh as salary, are not ready to work for taluk-level hospitals.
Please Wait while comments are loading...