ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನದಲ್ಲಿ ವೈದ್ಯರ ಮುಷ್ಕರದ ಕದನ : ಯಾರು, ಏನು ಹೇಳಿದರು?

|
Google Oneindia Kannada News

ಬೆಳಗಾವಿ, ನವೆಂಬರ್ 16 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವೈದ್ಯರ ಮುಷ್ಕರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ರೋಗಿಗಳ ಹಿತ ಕಾಪಾಡುವಂತೆ ಒತ್ತಾಯಿಸಿವೆ.

ವೈದ್ಯರ ಮುಷ್ಕರ : 2.30ರ ಗಡುವು ಕೊಟ್ಟ ಹೈಕೋರ್ಟ್ವೈದ್ಯರ ಮುಷ್ಕರ : 2.30ರ ಗಡುವು ಕೊಟ್ಟ ಹೈಕೋರ್ಟ್

ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಬಿಜೆಪಿ ವೈದ್ಯರ ಮುಷ್ಕರದ ವಿಷಯ ಪ್ರಸ್ತಾಪಿಸಿತು. ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಕ್ಷಣ ಚರ್ಚೆ ನಡೆಸಲು ಅವಕಾಶ ನೀಡಿ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಮನವಿ ಮಾಡಿದರು.

In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್

ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತೇನೆ ಎಂದು ಹೇಳಿದ ಸ್ಪೀಕರ್ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು. ಅಧಿವೇಶನ ಆರಂಭಕ್ಕೂ ಮುನ್ನ ಸುವರ್ಣವಿಧಾನಸೌಧದ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು.

ಖಾಸಗಿ ವೈದ್ಯರ ಮುಷ್ಕರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಛೀಮಾರಿ!ಖಾಸಗಿ ವೈದ್ಯರ ಮುಷ್ಕರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಛೀಮಾರಿ!

ಬಿಜೆಪಿ ಶಾಸಕರು ವೈದ್ಯರ ಪರವಾಗಿ ನಿಂತರು. ನೀವು ಜನ ಸಾಮಾನ್ಯರ ಪರವಲ್ಲವೇ? ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರೆ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ನಿಮಗೇನು ತಲೆಕೆಟ್ಟಿದೆಯಾ?' ಎಂದು ಪ್ರಶ್ನೆ ಮಾಡಿ ಉದ್ಧಟತನ ಪ್ರದರ್ಶನ ಮಾಡಿದರು.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪ

ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪ

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವೈದ್ಯರ ಮುಷ್ಕರದ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. 'ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಆದ್ದದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ವೈದ್ಯರನ್ನು ಕರೆದು ಆರೋಗ್ಯ ಸಚಿವರು, ಸಿಎಂ ಇಬ್ಬರು ಮಾತಾಡಲಿ' ಎಂದು ಈಶ್ವರಪ್ಪ ಹೇಳಿದರು.

'ಉತ್ತರ ಕೊಡುತ್ತಾರೆ'

'ಉತ್ತರ ಕೊಡುತ್ತಾರೆ'

ಪರಿಷತ್ತಿನಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಸಮಸ್ಯೆಯ ಗಂಭೀರತೆ ಬಗ್ಗೆ ನಮಗೆ ತಿಳಿದಿದೆ. ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಉತ್ತರ ನೀಡುತ್ತಾರೆ' ಎಂದರು.

'ಮೂರು ಪಕ್ಷದ ಬೆಂಬಲಿಗರು ಇದ್ದಾರೆ'

'ಮೂರು ಪಕ್ಷದ ಬೆಂಬಲಿಗರು ಇದ್ದಾರೆ'

'ಪ್ರತಿಭಟನೆ ನಡೆಸುತ್ತಿರುವ ವೈದ್ಯರಲ್ಲಿ ಮೂರು ಪಕ್ಷದವರು ಇದ್ದಾರೆ. ವೈದ್ಯರ ಸಂಘದ ಮುಖ್ಯಸ್ಥ ಡಾ.ರವೀಂದ್ರ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೂ ಸರ್ಕಾರ ಅವರ ಮನವಿಗೆ ಏಕೆ ಸ್ಪಂದಿಸುತ್ತಿಲ್ಲ' ಎಂದು ಈಶ್ವರಪ್ಪ ಪ್ರಶ್ನಿಸಿದರು.

'ಸದನಕ್ಕೆ ತಂದೇ ಇಲ್ಲ'

'ಸದನಕ್ಕೆ ತಂದೇ ಇಲ್ಲ'

ವಿಧಾನಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, 'ಮಸೂದೆಯನ್ನು ನಾವು ಇನ್ನೂ ಸದನಕ್ಕೆ ತಂದೇ ಇಲ್ಲ. ಮಸೂದೆ ವಿಚಾರದಲ್ಲಿ ನನಗೆ ಯಾವ ಪ್ರತಿಷ್ಠೆಯೂ ಇಲ್ಲ. ಸರ್ಕಾರಕ್ಕೆ ವೈದ್ಯರು ಬೆದರಿಕೆ ಹಾಕುತ್ತಿದ್ದಾರೆ' ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

'ವೈದ್ಯರನ್ನು ಕರೆಸಿ ಮಾತನಾಡಿ'

'ವೈದ್ಯರನ್ನು ಕರೆಸಿ ಮಾತನಾಡಿ'

'ಮುಷ್ಕರ ನಿರತ ವೈದ್ಯರನ್ನು ಕರೆಸಿ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತನಾಡಲಿ. ವೈದ್ಯರು ಸಹ ಮುಷ್ಕರ ನಿಲ್ಲಿಸಿ, ಮಾನವೀಯತೆಯಿಂದ ಜನರ ಸೇವೆ ಮಾಡಲಿ' ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.

English summary
Private hospital doctor's protesting against proposed amendments to the Karnataka Private Medical Establishments Act, 2017. Who said what in Belagavi winter session?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X