ವೈದ್ಯರ ಮುಷ್ಕರ : ಸರ್ಕಾರದ ಜೊತೆ ನಡೆದ ಮಾತುಕತೆ ವಿಫಲ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 17 : ಮುಷ್ಕರ ನಿರತ ವೈದ್ಯರು ಮತ್ತು ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿದೆ. ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದು, ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆಯಿತು. ಆರೋಗ್ಯ ಸಚಿವ ರಮೇಶ್ ಕುಮಾರ್, ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಶುಕ್ರವಾರದಿಂದ ಒಪಿಡಿ ಸೇವೆ ಆರಂಭ

Doctors protest : CM meeting fails, protests to continue in Belagavi

'ಕರ್ನಾಟಕ ಖಾಸಗಿ ವೈದ್ಯಕೀಯ ಮಸೂದೆ ತಿದ್ದುಪಡಿ 2017'ರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆದರೆ, ಮಸೂದೆ ಮಂಡನೆ ಮಾಡುವ ಬಗ್ಗೆ ಒಮ್ಮತದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು.

ತಕ್ಷಣ ಮುಷ್ಕರ ನಿಲ್ಲಿಸಿ, ವೈದ್ಯರಿಗೆ ಹೈಕೋರ್ಟ್ ಸೂಚನೆ

ಈ ಸಭೆಗೂ ಮೊದಲು ಆರೋಗ್ಯ ಸಚಿವ ರಮೇಶ್ ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದರು. ಅಧಿಕಾರಿಗಳಿಂದ ಮಸೂದೆ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದರು.

ಖಾಸಗಿ ಆಸ್ಪತ್ರೆಗಳ ಹಿತ ಕಾಪಾಡೋದು ಸರ್ಕಾರದ ಜವಾಬ್ದಾರಿ: ಸಂದರ್ಶನ

ವೈದ್ಯರ ವೃತ್ತಿ ದರ ನಿಗದಿ ಮಾಡುವ ಅಧಿಕಾರ ಸರ್ಕಾರದ ವ್ಯಾಪ್ತಿಯಿಂದ ಹೊರಗೆ, ಆದರೆ, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ನಿಗದಿ ಅಧಿಕಾರ ಸರ್ಕಾರಕ್ಕೆ, ಆಯಾ ಆಸ್ಪತ್ರೆಗಳ ಸ್ಥಳ, ಮೂಲಭೂತ ಸೌಕರ್ಯ ಆಧರಿಸಿ ಗ್ರೇಡ್ ನೀಡುವ ಮೂಲಕ ದರ ನಿಗದಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, 'ಶುಕ್ರವಾರ ಮತ್ತೆ ಸಭೆ ಸೇರುತ್ತೇವೆ. ವೈದ್ಯರ ಆತಂಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಧಿಮಾಕಿನಿಂದ ಕಾಯ್ದೆ ಮಾಡಿದ್ದೇವೆ ಎಂದು ಕೊಳ್ಳಬಾರದು, ಅದಕ್ಕಾಗಿ ಮಾತುಕತೆ ನಡೆಸುತ್ತೇವೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doctor protest against proposed amendments to the Karnataka Private Medical Establishments Act, 2017 to continue in Belagavi, Karnataka. Chief Minister meeting with doctors failed on November 16, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ