ಸೀಟು ಕೊಡುವ ಮುಂಚೆ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಿಸಿ : ಸಿ.ಎಂ ಇಬ್ರಾಹಿಂ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 14 : ಡ್ರಗ್ಸ್, ಮಾದಕ ದ್ರವ್ಯ ವ್ಯಸನ ಬೆಂಗಳೂರಿನಲ್ಲಿ ವ್ಯಾಪಿಸುತ್ತಿರುವುದರ ಬಗ್ಗೆ ಮಾತನಾಡಿದ ವಿಕಟ ರಾಜಕಾರಣಿ ಎಂದೇ ಖ್ಯಾತ ರಾಜಕಾರಣಿ ಸಿ.ಎಂ.ಇಬ್ರಾಹಿಂ ಅವರು ತಮ್ಮ ವಿಕಟ ತಂಬಿದ ಮಾತಿನ ಮೂಲಕವೇ ಇದಕ್ಕೆ ಪರಿಹಾರ ಸೂಚಿಸಿದರು.

ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು

ಇಬ್ರಾಹಿಂ ಅವರ ಪ್ರಕಾರ ಮಾದಕ ದ್ರವ್ಯ ವ್ಯಸನ ಉತ್ತರ ಭಾರತದಿಂದ ಬಂದಿರುವುದಂತೆ. "ಉತ್ತರ ಭಾರತದಿಂದ ಓದಲು ಬಂದ ಮಾದಕ ದ್ರವ್ಯ ವ್ಯಸನಿ ವಿದ್ಯಾರ್ಥಿಗಳು ಇಲ್ಲಿ ಬಂದು ಇಲ್ಲಿನ ವಿದ್ಯಾರ್ಥಿಗಳಿಗೂ ಅದನ್ನು ಅಂಟಿಸಿ ಹೋಗಿ ಬಿಡುತ್ತಾರೆ' ಎಂದರು.

Do blood test of students befire giving seat in college : C.M.Ibrahim

ಮಾದಕ ದ್ರವ್ಯ ವ್ಯಸನ ತಡೆಗಟ್ಟಲು ಪರಿಹಾರವನ್ನು ಸೂಚಿಸಿದ ಅವರು "ಉತ್ತರ ಭಾರತದಿಂದ ಕಾಲೇಜು ಸೀಟು ಕೇಳಿ ಬರುವ ವಿದ್ಯಾರ್ಥಿಗಳಿಗೆ ಬ್ಲಡ್ ಟೆಸ್ಟ್' ಮಾಡಿಸಿ ಮಾದಕ ದ್ರವ್ಯ ವಸನಿ ಅಲ್ಲ ಎಂಬುದು ಗೊತ್ತಾದರೆ ಮಾತ್ರ ಸೀಟು ಕೊಡಿ, ಇದರಿಂದ ಸಮಸ್ಯೆ ಪರಿಹಾರವಾಗಿಬಿಡುತ್ತದೆ' ಎಂದು ಹೇಳಿದರು.

ಇಬ್ರಾಹಿಂ ಅವರು ಸೂಚಿಸಿದ ಪರಿಹಾರವನ್ನು ಸ್ವತಃ ಅವರು ತಮ್ಮ ಕಾಲೇಜಿನಲ್ಲಿ ಅನುಷ್ಠಾನಕ್ಕೂ ತಂದಿದ್ದಾರಂತೆ. 'ನನ್ನ ಒಡೆತನದ ಎಂಜಿನೀಯರಿಂಗ್ ಕಾಲೇಜಿನಲ್ಲಿ ಈ ಪದ್ದತಿ ಜಾರಿ ಮಾಡಿದ್ದೆನೆ, ಬ್ಲಡ್ ರಿಪೋರ್ಟ್ ಬಂದ ಮೇಲಷ್ಟೆ ಕಾಲೇಜು ಸೀಟು ಕೊಡುತ್ತೇನೆ' ಎಂದರು ಅವರು.

ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR

ಕುಡಿತ ಸಿಗರೇಟ್ ಚಟ ಬಿಡಿಸಬಹುದು ಆದ್ರೆ ಗಾಂಜಾ ಅಫೀಮು ಚಟ ಒಮ್ಮೆ ತಲೆಗೇರಿದರೆ ಬಿಡಿಸಲು ಸಾಧ್ಯವಿಲ್ಲ ಕಾಲೇಜು ಸೀಟಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ್ರೆ 10 ವರ್ಷಗಳಲ್ಲಿ ಕರ್ನಾಟಕ ಡ್ರಗ್ ಮುಕ್ತವಾಗತ್ತೆ ಹಾಗಾಗಿ ಈ ಕುರಿತು ಸರ್ಕಾರ ಒಂದು ನಿಯಮ ತರಬೇಕು ಎಂದು ಒತ್ತಾಯಿಸಿದರು.

ಡ್ರಗ್ಸ್ ಮಾಫಿಯಾ ಬೆಳೆಯುವಲ್ಲಿ ಪೊಲೀಸರ ಕೈವಾಡವೂ ಇದೆ ಎಂದ ಸಿ.ಎಂ.ಇಬ್ರಾಹಿಂ ಬೇಲಿಯೇ ಎದ್ದು ಹೊಲೆ ಮೇಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುಡಿಗಾಸಿಗಾಗಿ ಪೊಲೀಸರೆ ಈ ದಂದೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

ಮಾದಕ ವಸ್ತು ಮಾರಾಟ ಮಾಡುವಾಗ ಸಿಕ್ಕಬಿದ್ದ ಅಪರಾಧಿಗಳಿಗೆ ಕೊಡಬಹುದಾದ ಶಿಕ್ಷೆಯ ಪ್ರಮಾಣವನ್ನೂ ಸೂಚಿಸಿದ ಇಬ್ರಾಹಿಂ "ಮಾದಕ ವಸ್ತು ಸಂಬಂಧಪಟ್ಟ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ವ್ಯಕ್ತಿಯನ್ನು ನೇಣಿಗೇರಿಸಿ ಬಿಟ್ಟರೆ ಎಲ್ಲರಿಗೂ ಭಯ ಬಂದು ಕೂಡಲೇ ದಂದೆ ನಿಲ್ಲಿಸಿಬಿಡುತ್ತಾರೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
to privent Drug adiction and mafia in Bangalore C.M.Ibrahim advises to do blood test of north india students who seek seat in city colleges. according to C.M.Ibrahim north indian students are the main reson for growing drug maphia in bangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ