ಬೆಳಗಾವಿ:ಕೋರೆಗಾಂವ್ ಗಲಾಟೆ, ದಲಿತಪರ ಸಂಘಟನೆಗಳ ಪ್ರತಿಭಟನೆ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಜನವರಿ 03 : ಮಹಾರಾಷ್ಟ್ರದ ಭೀಮ ಕೊರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಗಲಾಟೆಯನ್ನು ಖಂಡಿಸಿ ಬೆಳಗಾವಿಯ ವಿವಿಧ ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಳಿದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು

ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ

ಭೀಮ ಕೊರೆಗಾಂವ್ ಗ್ರಾಮದಲ್ಲಿ ಲಕ್ಷಾಂತರ ಜನ ದಲಿತ ಬಾಂಧವರು ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಮತೀಯ ಶಕ್ತಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟಿಕೆ ಪ್ರದರ್ಶಿಸಿದ್ದು ಕೂಡಲೇ ಸಮಾಜ ಕಂಟಕರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

Dalit condemns attack on Bhima Koregoan victory ceremony

ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಪೊಲೀಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬೀಮಾ ಕೋರೆಗಾಂವ ದಲ್ಲಿ ದಲಿತ ಬಂಧುಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಭೀಮ ಕೋರೆಗಾಂವ್ ಹಿಂಸಾಚಾರ: ದಲಿತ ಸಂಘಟನೆಗಳಿಂದ ಬುಧವಾರ ಮಹಾರಾಷ್ಟ್ರ ಬಂದ್

ಕೆಡಿ ಮಂತ್ರೇಶಿ,ಎಂ ಆರ್ ಕಲ್ಪತ್ರಿ,ಮಲ್ಲೇಶ ಚೌಗಲೆ , ಗಜು ಧರನಾಯಕ,ಸಧಾ ಕೋಲಕಾರ,ದುರ್ಗೇಶ ಮೇತ್ರಿ ತಾನಾಜಿ ದೇವರಮನಿ,ಸೇರಿದಂತೆ ಹಲವಾರು ಜನ ದಲಿತ ಮುಖಂಡರು ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Condemning the attack on Bhima Koregoan victory ceremony in Maharashtra, Dalit organisations have staged protest against Maharashtra government in Belgaum on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ