ದತ್ತಪೀಠ ರಥಯಾತ್ರೆಗೆ ಅವಕಾಶ ಕಲ್ಪಿಸಬೇಕು

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ 22 : ಚಿಕ್ಕಮಗಳೂರಿನಲ್ಲಿ ಡಿಸೆಂಬರ್ 1ರಿಂದ ಪ್ರಾರಂಭವಾಗಲಿರುವ ದತ್ತ ಜಯಂತಿಯಲ್ಲಿ ದತ್ತಪೀಠದ ರಥಯಾತ್ರೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಿಜೆಪಿ ನಾಯಕ ಸಿ ಟಿ ರವಿ ಬುಧವಾರ ಮನವಿ ಮಾಡಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ದತ್ತ ಪೀಠದ ರಥಯಾತ್ರೆಗೆ ಅನುಮತಿ ನೀಡಬೇಕು, ಭಜರಂಗದಳ, ಹಿಂದೂ ಸಂಘಟನೆಗಳ ರಥಯಾತ್ರೆಗೆ ಕೂಡ ಅವಕಾಶ ಕೊಟ್ಟಿಲ್ಲ. ಯಾತ್ರೆಗೆ ಅವಕಾಶ ಮಾಡಿಕೊಟ್ಟು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಹೇಳಿದರು.

CT Ravi seeks permission to Ratha Yatra

ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಯಿಸಿ ಹಿಂದಿನ ವರ್ಷ ದತ್ತಮಾಲಾ ಅಭಿಯಾನಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಯಾವ ರೀತಿ ಅನುಮತಿ ಕೊಟ್ಟಿತ್ತೋ ಈ ವರ್ಷವೂ ಕೂಡ ಅಷ್ಟೇ ಅನುಮತಿ ನೀಡಲಾಗುತ್ತದೆ, ಅದನ್ನು ಬಿಟ್ಟು ಯಾವುದೇ ಹೊಸ ಸಂಪ್ರದಾಯಗಳು, ರಥಯಾತ್ರೆ ನಡೆಸಲು ಅವಕಾಶವಿಲ್ಲ ಎಂದು ಸ್ಪಷ್ಟಪಿಡಿಸದರು.

ಸಿಟಿ ರವಿ- ಸಿದ್ದು ಮಧ್ಯೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ

ದತ್ತ ಜಯಂತಿ ಅಭಿಯಾನ ಅಂಗವಾಗಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ದತ್ತ ರಥಯಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

ರಥಯಾತ್ರೆಗೆ ಪೂರಕವಾಗಿ ಬೈಕ್ ಜಾಥಾ, ಪಾದಯಾತ್ರೆ, ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಮತ್ತು ಸಮಾರಂಭಗಳನ್ನು ನವೆಂಬರ್ 24ರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 2ರ ಮಧ್ಯಾಹ್ನ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ದತ್ತ ಜಯಂತಿ ಹಾಗೂ ಈದ್ ಮಿಲಾದ್ ಒಂದೇ ದಿನವೇ ಬಂದಿರುವುದರಿಂದ ಕಾನೂನು ಸುವ್ಯವಸ್ಥೆ ಸಲುವಾಗಿ 48 ಮಂದಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿದ್ದು, ಅವರು ನ. 30ರಿಂದ ಡಿ.4ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ನವೆಂಬರ್ 23ರಂದು ದತ್ತಮಾಲೆ ಧರಿಸಲಿದ್ದಾರೆ. ಡಿಸೆಂಬರ್ 1ರಂದು ಅನುಸೂಯ ದೇವಿ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ, ಡಿಸೆಂಬರ್ 2ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಡಿ.3 ರಂದು ದತ್ತ ಜಯಂತಿ ಉತ್ಸವ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MLA CT Ravi urged state Government to ensure during Datta Jayanti from de.1 to 3,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ