ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡಳಿತ ಪಕ್ಷದಿಂದಲೇ ವಿಧಾನಸಭೆಯಲ್ಲಿ ಧರಣಿ

By Ananthanag
|
Google Oneindia Kannada News

ಬೆಳಗಾವಿ, ನವೆಂಬರ್ 22: ಆಡಳಿತ ಪಕ್ಷದ ಸದಸ್ಯರಿಂದಲೇ ವಿದಾನ ಸಭೆಯಲ್ಲಿ ಧರಣಿ ನಡೆದ ಪ್ರಸಂಗ ಜರುಗಿತು.

ಲಂಬಾಣಿ ತಾಂಡ್ಯಗಳು, ಅನಧಿಕೃತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಪಕ್ಷದ ಶಾಸಕರು ಧರಣಿ ನಡೆಸಿದರು.

ಪ್ರಶ್ನೋತ್ತರ ಕಲಾಪವಾದ ನಂತರ ತಾಂಡ್ಯಗಳ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಶಾಸಕ ಶಿವಮೂರ್ತಿ ಅವರು ಪ್ರಯತ್ನಿಸಿದರು. ಸರಿಯಾದ ಮನ್ನಣೆ ದೊರೆಯಲಿಲ್ಲ. ನಾನು ಈ ಸದನಕ್ಕೆ ಬಂದು ಮೂರೂವರೆ ವರ್ಷವಾಗಿದೆ. ಲಂಬಾಣಿ ತಾಂಡ್ಯಗಳು, ಹಾಡಿಗಳು, ಹಟ್ಟಿಗಳು ಖಾಸಗಿ ಹಾಗೂ ಅರಣ್ಯ ಜಮೀನುಗಳಲ್ಲಿವೆ. ಅವನ್ನು ಅನಧಿಕೃತ ಎಂದು ತೀರ್ಮಾನಿಸಿರುವ ಸರ್ಕಾರ ಈವರೆಗೂ ಮೂಲಸೌಲಭ್ಯ ಕಲ್ಪಿಸಿಲ್ಲ. ಇದಕ್ಕಾಗಿ ಪ್ರತ್ಯೇಕ ಕಾನೂನು ರಚನೆಯಾಗಬೇಕು ಎಂದು ಕಿಡಿಕಾರಿದರು.

Councillor Shankara murthy protest against own party

ಖಾಸಗಿ ಬಿಲ್ ಮಂಡನೆಗೆ ನಾನು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ಕೂಗಾಡುತ್ತಾ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.
ಈ ವೇಳೆ ಬಿಜೆಪಿ ಶಾಸಕರು ಮೇಜುಕುಟ್ಟಿ ಲೇವಡಿ ಮಾಡಿದರು. ಸಭಾಧ್ಯಕ್ಷರು ನೀವು ಸ್ವಸ್ಥಾನಕ್ಕೆ ತೆರಲಿ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡುವುದಾಗಿ ತಿಳಿಸಿದರು. ಸ್ವ ಸ್ಥಾನಕ್ಕೆ ಮರಳಿ ಶಿವಮೂರ್ತಿ ರಾಜ್ಯದಲ್ಲಿ 58 ಸಾವಿರ ದಾಖಲೆ ರಹಿತ ಗ್ರಾಮಗಳಿವೆ. ಇವುಗಳಿಗೆ ಅಧಿಕೃತ ಸ್ಥಾನಮಾನ ನೀಡಬೇಕು. ಇವುಗಳಿಗೆ ಪ್ರತ್ಯೇಕ ಕಾಯ್ದೆ ರಚಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಭೂ ಸುಧಾರಣಾ ಕಾಯ್ದೆಗೆ ನಿನ್ನೆ ಒಪ್ಪಿಗೆ ನೀಡಲಾಗಿದೆ. ಬೇರೆ ಬೇರೆ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ತಾಂಡ್ಯಗಳು, ಹಟ್ಟಿಗಳು ನಿರ್ಮಾಣಗೊಂಡಿವೆ. ಅವುಗಳನ್ನು ಸಕ್ರಮ ಮಾಡಲು ಹಕ್ಕುಪತ್ರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳಿಂದ ವರದಿ ಪಡೆಯುತ್ತಿದ್ದೇವೆ. ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು.

English summary
ten days Karnataka Assembly winter session in Belagavi. Day two tuesday Councillor Shankara murthy put down to house well protest against the own party. Bacause Lambani tandyagalu, unauthorized villages to demand to declare the revenue places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X