ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ನೀರು ಸರಬರಾಜು ಮಂಡಳಿ ಎದುರು ನಗರ ಸೇವಕರ ಧರಣಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 22 : ನಗರದ ಸಮೀಪ ಬಸವನಕೊಳ್ಳ ಗ್ರಾಮದಲ್ಲಿ 40 ಕೋಟಿ ಖರ್ಚು ಮಾಡಿ ಜಲ ಶುದ್ಧೀಕರಣ ಘಟಕ ನಿರ್ಮಿಸಿದರೂ ಅಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ ಎಂದು ಆರೋಪಿಸಿ ನಗರಸೇವಕರು ನೀರು ಸರಬರಾಜು ಮಂಡಳಿ ಯ ಕಚೇರಿ ಎದುರು ಧರಣಿ ಕುಳಿತಿದ್ದಾರೆ.

ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ಡಾ ದಿನೇಶ ನಾಶೀಪುಡಿ ನಗರ ಸೇವಕಿ ಪುಷ್ಪಾ ಪರ್ವತರಾವ ಅವರು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಧರಣಿ ಕುಳತಿದ್ದಾರೆ.

ಮಾದ್ಯಮಗಳ ಜೊತೆ ಮಾತನಾಡಿದ ದೀಪಕ ಜಮಖಂಡಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಹಾಂತೇಶ ನಗರ ಆಂಜನೇಯ ನಗರ,ರಾಮತೀರ್ಥ ನಗರ,ಅಟೋ ನಗರ,ಮಾಳಮಾರುತಿ ಬಡಾವಣೆ,ಕಣಬರ್ಗಿ,ಉಜ್ವಲ ನಗರ ,ಗಾಂಧೀನಗರ ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಬಸವನಕೊಳ್ಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಜಲ ಶುದ್ಧೀಕರಣ ಘಟಕದ ನಿರ್ಮಾಣ ಮಾಡಲಾಗಿದೆ ಆದರೂ ಈ ಪ್ರದೇಶಗಳಿಗೆ ಹತ್ತು ದಿನಕ್ಕೊಂದು ಬಾರಿ ವಾರದಲ್ಲಿ ಒಂದು ಬಾರಿ ನೀರು ಬಿಡಲಾಗಿತ್ತಿದೆ ಎಂದು ದೀಪಕ ಜಮಖಂಡಿ ಆರೋಪಿಸಿದರು.

Corporators stage protest seeking proper water supply in Belgaum

ಅಧಿಕಾರಿಗಳು ಫೀಲ್ಡಿಗೆ ಬಾರದೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ನೀರು ಸಾಕಷ್ಟಿದೆ ಲಕ್ಷ್ಮಿ ಟೇಕಡಿಯ ಜಲಶುದ್ಧೀಕರಣ ಘಟಕದಿಂದ ಪ್ರತಿದಿನ ನೀರು ಸರಬರಾಜು ಆಗುತ್ತಿದೆ ಆದ್ರೆ ಬಸವನಕೊಳ್ಳ ಘಟಕ ನಿರ್ಮಾಣ ಆದ್ರೂ ಇಲ್ಲಿಯ ಜನರಿಗೆ ಉಪಯೋಗ ಆಗುತ್ತಿಲ್ಲ ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ದೀಪಕ ಜಮಖಂಡಿ ಆರೋಪಿಸಿದರು ಸಮಸ್ಯೆಗೆ ಪರಿಹಾರ ಸಿಗೋವರೆಗೆ ಧರಣಿ ನಿಲ್ಸುವದಿಲ್ಲ ಎಂದು ನಗರ ಸೇವಕರು ಎಚ್ಚರಿಸಿದ್ದಾರೆ.

English summary
Seeking proper water supply in Belgaum despite Rs.40 crore of water treatment installation, corporators of Belgaum Mahanagara palike held protest on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X